alex Certify ಅನೇಕ ಕಾಯಿಲೆಗಳಿಗೆ ʼರಾಮಬಾಣʼ ಹುರಿದ ಬೆಳ್ಳುಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನೇಕ ಕಾಯಿಲೆಗಳಿಗೆ ʼರಾಮಬಾಣʼ ಹುರಿದ ಬೆಳ್ಳುಳ್ಳಿ

ಆಹಾರದ ರುಚಿ ಹೆಚ್ಚಿಸಲು ನಾವು ಬೆಳ್ಳುಳ್ಳಿಯನ್ನು ಉಪಯೋಗಿಸ್ತೇವೆ. ಇದ್ರ ಬಳಕೆಯಿಂದ ಆಹಾರದ ರುಚಿ ಬದಲಾಗುತ್ತದೆ. ಆದ್ರೆ ಈ ಬೆಳ್ಳುಳ್ಳಿಯ ಒಂದು ಮೊಗ್ಗು, ರುಚಿ ಹೆಚ್ಚಿಸುವ ಜೊತೆಗೆ ನಮ್ಮ ದೇಹದಲ್ಲಿರುವ ಅನೇಕ ರೋಗಗಳನ್ನು ಹೊಡೆದೋಡಿಸಲು ನೆರವಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವುದು ಅಮೃತಕ್ಕೆ ಸಮಾನ. ಮೂಲವ್ಯಾಧಿ, ಮಲಬದ್ಧತೆ, ಕಿವಿನೋವು, ರಕ್ತದೊತ್ತಡ ಇತ್ಯಾದಿ ಅನೇಕ ಕಾಯಿಲೆಗಳಿಗೆ ಇದು ರಾಮಬಾಣ. ಹಸಿವನ್ನು ಹೆಚ್ಚಿಸುವ ಕೆಲಸವನ್ನೂ ಇದು ಮಾಡುತ್ತದೆ. ಇತ್ತೀಚೆಗೆ ನಡೆದ ಸಂಶೋಧನೆಯೊಂದು ಬೆಳ್ಳುಳ್ಳಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬ ವಿಷಯವನ್ನು ಬಿಚ್ಚಿಟ್ಟಿದೆ. ಅದ್ರ ಪ್ರಕಾರ ಪ್ರತಿದಿನ 5-6 ಬೆಳ್ಳುಳ್ಳಿ ಮೊಗ್ಗನ್ನು ತಿನ್ನುವ ವ್ಯಕ್ತಿಗೆ ಕೆಲವೇ ಗಂಟೆಗಳಲ್ಲಿ ಅದರ ಪರಿಣಾಮ ಕಾಣುತ್ತದೆ.

ದೇಹಕ್ಕೆ ಹೋದ ಬೆಳ್ಳುಳ್ಳಿ ಒಂದು ಗಂಟೆಯಲ್ಲಿ ಜೀರ್ಣವಾಗಿ ಅದು ಆರೋಗ್ಯ ವೃದ್ಧಿ ಕೆಲಸ ಶುರುಮಾಡುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಶರೀರದಲ್ಲಿರುವ ವಿಷ ಪದಾರ್ಥವನ್ನು ಮಲ ಹಾಗೂ ಮೂತ್ರದ ಮೂಲಕ ಹೊರ ಹಾಕುತ್ತದೆ. ಶರೀರಕ್ಕೊಂದು ವಿಶೇಷ ಶಕ್ತಿ ಬರುತ್ತದೆ. ಇದರಿಂದ ನಿಮ್ಮ ದೇಹದ ಆಲಸ್ಯ ಕಡಿಮೆಯಾಗುತ್ತದೆ. ಹುರಿದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಕ್ಯಾನ್ಸರ್ ಕೋಶಗಳು ಶಕ್ತಿ ಕಳೆದುಕೊಳ್ಳುತ್ತವೆ.

ಪ್ರತಿದಿನ ಹುರಿದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಚಯಾಪಚಯ ಸುಲಭವಾಗಿ ಬೊಜ್ಜು ಕರಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಶ್ವಾಸನಾಳಕ್ಕೆ ಬಹಳ ಪ್ರಯೋಜನಕಾರಿ. ಅಸ್ತಮಾ, ಕೆಮ್ಮು, ಕಫ ಕಡಿಮೆ ಮಾಡುವ ಗುಣ ಬೆಳ್ಳುಳ್ಳಿಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...