ನಮ್ಮಿಂದ ಯಾವುದೇ ಒಂದು ವ್ಯಕ್ತಿಗೆ ಅಥವಾ ಯಾವುದೇ ಗ್ರೂಪಿಗೆ ತಪ್ಪಾಗಿ ಮೆಸೇಜ್ ಫಾರ್ವರ್ಡ್ ಆಗಿದ್ದರೆ ಆ ಮೆಸೇಜನ್ನು ನಾವು ತಕ್ಷಣ ಡಿಲೀಟ್ ಮಾಡುತ್ತೇವೆ. ಅದು ಕೂಡ ಡಿಲೀಟ್ ಫಾರ್ ಎವರಿ ಒನ್ ಫೀಚರ್ ನಿಂದ. ನಿಮಗೆ ಡಿಲೀಟ್ ಆದ ಮೆಸೇಜನ್ನು ಓದುವ ಕುತೂಹಲವಿದ್ದರೆ ಹೇಗೆ ಓದಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ.
ಗೂಗಲ್ ಪ್ಲೇ ಸ್ಟೋರ್ನಲ್ಲಿರುವ ಆ್ಯಪ್ಗಳ ಮೂಲಕ ವಾಟ್ಸ್ಆ್ಯಪ್ನಲ್ಲಿ ಡಿಲೀಟ್ ಆದ ಮೆಸೇಜ್ಗಳನ್ನು ನೋಡಬಹುದಾಗಿದೆ. WAMR, Whats Deleted, Deleted WhatsApp message ಥರ್ಡ್ ಪಾರ್ಟಿ ಆ್ಯಪ್ಗಳ ಮೂಲಕ ಡಿಲಿಟ್ ಆದ ಮೆಸೇಜ್ಗಳು ಏನು ಎಂಬುದನ್ನು ನೋಡಬಹುದು.
ಗೂಗಲ್ ಪ್ಲೇ ಸ್ಟೋರ್ ನಿಂದ WhatsApp Removed ಅಪ್ಲಿಕೇಶನನ್ನು ಡೌನ್ ಲೋಡ್ ಮಾಡಿ. ಅಪ್ಲಿಕೇಶನ್ನ ಸೆಟ್ಟಿಂಗ್ಸ್ ಅನ್ನು ಪೂರ್ಣಗೊಳಿಸಿ ಅನುಮತಿ ನೀಡಿ. ಬಳಿಕ ಯಾವ ಅಪ್ಲಿಕೇಶನ್ ನೋಟಿಫಿಕೇಶನ್ ಅನ್ನು ಸೇವ್ ಮಾಡಬೇಕೋ ಅದನ್ನು ಸೆಲೆಕ್ಟ್ ಮಾಡಿ. ಅಂದರೇ, ವಾಟ್ಸ್ಆ್ಯಪ್ ನೋಟಿಫಿಕೇಶನ್ ಸೇವ್ ಮಾಡಬೇಕು ಎಂದಿದ್ದರೇ, ವಾಟ್ಸ್ಆ್ಯಪ್ ಮೇಲೆ ಕ್ಲಿಕ್ ಮಾಡಿ. NEXT ಆಯ್ಕೆಯನ್ನು ಒತ್ತಿರಿ.
ಮೊದಲು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ.
* ಸರ್ಚ್ ನಲ್ಲಿ ‘ವಾಟ್ಸಾಪ್ ಡಿಲೀಟ್ ಮೆಸೇಜ್’ ಎಂದು ಟೈಪ್ ಮಾಡಿ.
* ತಕ್ಷಣವೇ ವಿವಿಧ ರೀತಿಯ ಅಪ್ಲಿಕೇಶನ್ ಗಳು ಪ್ರದರ್ಶಿಸಲ್ಪಡುತ್ತವೆ.
* ಉತ್ತಮ ರೇಟಿಂಗ್ ಮತ್ತು ಪ್ರತಿಕ್ರಿಯೆಯನ್ನು ಹೊಂದಿರುವ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಿ ಮತ್ತು ಡೌನ್ ಲೋಡ್ ಮಾಡಿ.
* ಅದರ ನಂತರ, ಅಪ್ಲಿಕೇಶನ್ ಗೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ನೀಡಬೇಕು. ಈ ಅಪ್ಲಿಕೇಶನ್ ಸಹಾಯದಿಂದ, ಅಳಿಸಿದ ಸಂದೇಶಗಳನ್ನು ಹಿಂಪಡೆಯಬಹುದು.ವಾಮರ್ ಮತ್ತು ವಾಟ್ಸಾಪ್ ರಿಮೂವ್ಡ್ ಪ್ಲಸ್ ನಂತಹ ಅಪ್ಲಿಕೇಶನ್ ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.