ಬೆಂಗಳೂರು : ತನ್ನ ಆದಾಯವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ರಾಜ್ಯದ ಪ್ರಮುಖ ಸಾರಿಗೆ ಸಂಸ್ಥೆಯಾದ ಕೆಎಸ್ಆರ್ಟಿಸಿ ಇದೇ ಮೊದಲ ಬಾರಿಗೆ ಲಾರಿ ಖರೀದಿ ಮಾಡುತ್ತಿದ್ದು, ಡಿಸೆಂಬರ್ 23 ರಿಂದ ಈ ಲಾರಿಗಳು ಓಡಲಿವೆ. ರಾಜ್ಯದ ಪ್ರಮುಖ ನಗರಗಳಿಗೆ ಕಾರ್ಗೋ ಸೇವೆ ಲಭ್ಯವಾಗಲಿದೆ.
ಮೊದಲ ಹಂತದಲ್ಲಿ ಕೊರಿಯರ್ ಸರ್ವಿಸ್ ಡಿ.23ರಿಂದ ಆರಂಭವಾಗಲಿದೆ. ಈ ಮೂಲಕ ಸರ್ಕಾರಿ ಉದ್ಯಮವನ್ನು ವಿಸ್ತರಣೆ ಮಾಡುವ ಕಾರ್ಯಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮುಂದಾಗಿದ್ದಾರೆ.ಡೋರ್ ಸ್ಟೆಪ್ ಸೇವೆಯನ್ನು ನೀಡುವ ಉದ್ದೇಶದಿಂದ ಈ ಲಾರಿಗಳನ್ನು ಖರೀಸಲಾಗಿದ್ದು, ಕೆಎಸ್ಆರ್ಟಿಸಿ ಈಗಾಗಲೇ ಬಸ್ಗಳಲ್ಲಿ ಕಾರ್ಗೋ ಸೇವೆಯನ್ನು ಆರಂಭಿಸಿದೆ. ಉತ್ಪಾದನಾ ಘಟಕಗಳಿಂದ ಸರಕುಗಳನ್ನು ಸಾಗಿಸುವವರಿಗೆ ಈ ಸೇವೆ ಅನುಕೂಲವಾಗಿದೆ.
KSRTC ಪ್ರಯಾಣಿಕರಿಗೆ ಸಾರಿಗೆ ಸೇವೆಯಿಂದ ಗಳಿಸುವ ಆದಾಯದ ಜೊತೆಗೆ, ಪರ್ಯಾಯ ಆದಾಯಕ್ಕಾಗಿ ಕಾರ್ಗೋ ಟ್ರಕ್ ಕಾರ್ಯಚರಣೆಗೆ ಮುಂದಾಗಿದೆ. ಡಿ.23 ರಂದು ಒಟ್ಟು 20 ನಮ್ಮ ಕಾರ್ಗೋ ಪಾರ್ಸೆಲ್ ಮತ್ತು ಕೋರಿಯರ್ ಟ್ರಕ್ ಗಳಿಗೆ ಚಾಲನೆಯನ್ನು ಸಾರಿಗೆ ಸಚಿವರು ನೀಡಲಿದ್ದಾರೆ.