ಉತ್ತರ ಭಾರತದ ಮಹಿಳೆಯರ ಮೂಲಕ ಸಲ್ವಾರ್ ಕಮೀಜ್ ನ ರೂಪದಲ್ಲಿ ಪ್ರಚಲಿತಕ್ಕೆ ಬಂದ ಚೂಡಿದಾರ್, ದಿನ ಕಳೆದಂತೆ ದಕ್ಷಿಣ ಭಾರತದಲ್ಲೂ ಮಹಿಳೆಯರ ಅಚ್ಚುಮೆಚ್ಚಿನ ಉಡುಗೆಯಾಗಿ ತನ್ನ ಪ್ರಭಾವ ಬೀರಿದೆ.
ತಮ್ಮ ಮೈ ಬಣ್ಣಕ್ಕೆ ತಕ್ಕಂತೆ ಬಟ್ಟೆಯ ಆಯ್ಕೆ ಮಾಡಿ ತಾನೂ ಇತರರ ಕಣ್ಣಿಗೆ ಬಹಳ ಅಂದವಾಗಿ ಕಾಣಬೇಕೆಂಬ ಇಚ್ಚೆ ಎಲ್ಲಾ ಯುವತಿಯರಿಗಿರುತ್ತದೆ. ಆ ಕಾರಣಕ್ಕಾಗಿ ಅತ್ಯಾಧುನಿಕ ಫ್ಯಾಷನ್ ಹೊಂದಿರುವ ತರಹೇವಾರಿ ಚೂಡಿದಾರ್ ಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಚೂಡಿದಾರ್ ಮೆಟೀರಿಯಲ್ ಗಳು ಇದೀಗ ವಿವಿಧ ವಿನ್ಯಾಸ ಹೊಂದಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಚೂಡಿದಾರ್ ಟಾಪ್, ಬಾಟಮ್ ಬಟ್ಟೆಗಳಲ್ಲೂ ಅದೇ ರೀತಿ ದುಪ್ಪಟ್ಟಗಳಲ್ಲೂ ಹೊಸ ವಿನ್ಯಾಸದ ಟ್ರೆಂಡ್ ಬರುತ್ತಲೇ ಇವೆ. ವಿವಿಧ ವಿನ್ಯಾಸದ ವರ್ಕ್ ಹಾಗೂ ಡಿಸೈನ್ ಇರುವ ಮೆಟೇರಿಯಲ್ ಗಳನ್ನು ಯುವತಿಯರು ಹೆಚ್ಚಾಗಿ ಇಷ್ಟಪಡುತ್ತಾರೆ.