alex Certify ಅಮೆರಿಕದಲ್ಲಿ ಆತಂಕ ಸೃಷ್ಟಿಸಿದೆ ಹೊಸ ಕೊರೊನಾ ರೂಪಾಂತರಿ; ಭಾರತಕ್ಕೂ ಕಾದಿದೆಯಾ ಅಪಾಯ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕದಲ್ಲಿ ಆತಂಕ ಸೃಷ್ಟಿಸಿದೆ ಹೊಸ ಕೊರೊನಾ ರೂಪಾಂತರಿ; ಭಾರತಕ್ಕೂ ಕಾದಿದೆಯಾ ಅಪಾಯ ?

ಕೊರೋನಾ ವೈರಸ್‌ನ ಹೊಸ ರೂಪಾಂತರ FLiRT, ಅಮೆರಿಕದಲ್ಲಿ ವೇಗವಾಗಿ ಹರಡುತ್ತಿದೆ. ಇದು ಕೋವಿಡ್-19 (SARS-CoV-2) ನ ಓಮಿಕ್ರಾನ್ JN.1 ವಂಶಾವಳಿಯಿಂದ ಬಂದಿದೆ. ವಿಜ್ಞಾನಿಗಳ ಪ್ರಕಾರ  ಇದು ಹಿಂದಿನ ರೂಪಾಂತರಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿರಬಹುದು. ಅಮೆರಿಕದಲ್ಲಿ  KP.2 ಪ್ರಕರಣಗಳು ವೇಗವಾಗಿ ಹೆಚ್ಚಿವೆ. ಏಪ್ರಿಲ್ 14 ಮತ್ತು ಏಪ್ರಿಲ್ 17 ರ ನಡುವೆ ವರದಿಯಾದ ಕೊರೊನಾ ಪ್ರಕರಣಗಳಲ್ಲಿ ಸುಮಾರು ನಾಲ್ಕನೇ ಒಂದು ಭಾಗವು ಈ KP.2 ರೂಪಾಂತರವಾಗಿದೆ.

ಸೆಪ್ಟೆಂಬರ್ 2023 ರಿಂದೀಚೆಗೆ ಅಮೆರಿದಲ್ಲಿ ಕೇವಲ 22.6 ಪ್ರತಿಶತ ವಯಸ್ಕರು ಮಾತ್ರ ನವೀಕರಿಸಿದ COVID-19 ಲಸಿಕೆಯನ್ನು ಸ್ವೀಕರಿಸಿದ್ದಾರೆ. ಹಾಗಾಗಿ ಜನಸಂಖ್ಯೆಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿದ್ದು, ಇದರಿಂದ ಕೊರೊನಾ ಭೀತಿ ಎದುರಾಗಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಅಮೆರಿಕಾದಲ್ಲಿ ಹರಡುತ್ತಿರುವ ಕೋವಿಡ್ ರೂಪಾಂತರಿ ಭಾರತಕ್ಕೆ ಎಷ್ಟು ಆತಂಕಕಾರಿ ಎಂಬುದನ್ನು ತಿಳಿಯೋಣ.

ಹೊಸ ಕೋವಿಡ್ ರೂಪಾಂತರಿಗೆ FLiRT ಎಂದು ಏಕೆ ಹೆಸರಿಸಲಾಗಿದೆ?

ಪ್ರಸ್ತುತ ಹರಡುತ್ತಿರುವ KP.2 ಮತ್ತು KP1.1 ಹೊಸ ರೂಪಾಂತರಗಳನ್ನು FLiRT ರೂಪಾಂತರಗಳು ಎಂದು ಕರೆಯಲಾಗುತ್ತಿದೆ. ಅಮೆರಿಕದ ಸಾಂಕ್ರಾಮಿಕ ರೋಗಗಳ ಸೊಸೈಟಿಯ ಪ್ರಕಾರ, FLiRT ಎಂಬ ಹೆಸರನ್ನು ವೈರಸ್‌ನ ರೂಪಾಂತರಗಳ ತಾಂತ್ರಿಕ ಪದನಾಮಗಳಿಂದ ಪಡೆಯಲಾಗಿದೆ. ಇವು ಕಳೆದ ವರ್ಷ ಚಳಿಗಾಲದಲ್ಲಿ ಹರಡಿದ್ದ ಓಮಿಕ್ರಾನ್ ಜೆಎನ್.1 ವಂಶಸ್ಥರು.

ಈಗಾಗ್ಲೇ FLiRT ಸೋಂಕಿನಿಂದ ಅಮೆರಿಕದಲ್ಲಿ ಕೆಲವರು ಆಸ್ಪತ್ರೆಗೂ ದಾಖಲಾಗಿದ್ದಾರೆ. ಅದೇ ರೀತಿ ಬ್ರಿಟನ್‌, ದಕ್ಷಿಣ ಕೊರಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಕೂಡ FLiRT ಪ್ರಕರಣಗಳ ಹೆಚ್ಚಳವು ಹೊಸ ಕರೋನಾ ಅಲೆಯ ಬೆದರಿಕೆಯನ್ನು ಸೃಷ್ಟಿಸಿದೆ. ಭಾರತದಲ್ಲಿ ಮೇ 6ರ ಹೊತ್ತಿಗೆ KP.2ನ 238 ಪ್ರಕರಣಗಳು ಮತ್ತು KP1.1 ನ 30 ಪ್ರಕರಣಗಳು ವರದಿಯಾಗಿವೆ.

FLiRT: ಹೊಸ ಕೋವಿಡ್ ರೂಪಾಂತರದ ಲಕ್ಷಣಗಳು

ಹೊಸ ರೂಪಾಂತರದ ಲಕ್ಷಣಗಳು ಇತರ ಓಮಿಕ್ರಾನ್ ರೂಪಾಂತರಗಳಿಗೆ ಹೋಲುತ್ತವೆ. FLiRT ರೋಗಿಗಳಲ್ಲಿ ಗಂಟಲು ನೋವು, ಕೆಮ್ಮು, ವಾಕರಿಕೆ, ಮೂಗಿನ ದಟ್ಟಣೆ, ಆಯಾಸ, ತಲೆನೋವು, ಸ್ನಾಯು ಅಥವಾ ದೇಹದ ನೋವು, ರುಚಿಯ ನಷ್ಟ ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ.

FLiRT: ಹಿಂದಿನ ರೂಪಾಂತರಗಳಿಗೆ ಹೋಲಿಸಿದರೆ ಎಷ್ಟು ಅಪಾಯಕಾರಿ?

JN.1ರ ಹಿಂದಿನ ರೂಪಾಂತರಗಳಿಗಿಂತ KP.2 ಪ್ರತಿರಕ್ಷಣಾ ವ್ಯವಸ್ಥೆಯನ್ನು ಎದುರಿಸಲು ಹೆಚ್ಚಿನ ಶಕ್ತಿಯನ್ನು ಹೊಂದಿದೆ ಎಂದು ಜಪಾನಿನ ಸಂಶೋಧಕರು ಕಂಡುಕೊಂಡಿದ್ದಾರೆ. KP.2 ಹೆಚ್ಚು ನವೀಕರಿಸಿದ ಲಸಿಕೆಗಳ ರಕ್ಷಣೆಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.

ಏಪ್ರಿಲ್‌ನಿಂದ ಭಾರತದಲ್ಲಿ ಕೂಡ ಕೊರೊನಾ ಪ್ರಕರಣಗಳು ಹೆಚ್ಚಾಗತೊಡಗಿವೆ. ಪ್ರತಿ ಆರು ಪರೀಕ್ಷೆಗಳಲ್ಲಿ ಒಂದು ಪಾಸಿಟಿವ್ ಬರುತ್ತಿದೆ. ಆದಾಗ್ಯೂ ತಜ್ಞರ ಪ್ರಕಾರ  ಭಾರತದಲ್ಲಿ ಹೆಚ್ಚುತ್ತಿರುವ ಪ್ರಕರಣಗಳಿಗೆ KP.2 ಅಥವಾ KP1.1 ಕಾರಣ ಎಂದು ಹೇಳುವುದು ಅಸಾಧ್ಯ. ಹಾಗಾಗಿ ಕೋವಿಡ್‌ನಿಂದ ಪಾರಾಗಲು ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು, ಅಂತರ ಕಾಯ್ದುಕೊಂಡು ಅಗತ್ಯಕ್ಕೆ ಅನುಗುಣವಾಗಿ ಮಾಸ್ಕ್ ಧರಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...