ತಾಯ್ತನ ಎನ್ನುವುದು ಹೆಣ್ಣಿಗೆ ತುಂಬಾ ಸಂತೋಷ ನೀಡುವ ಸಂಗತಿ. ಪ್ರತಿಯೊಂದು ಹೆಣ್ಣು ಆ ಸುಮಧುರ ಕ್ಷಣವನ್ನು ಅನುಭವಿಸಲು ಬಯಸುವವರೇ. ಗರ್ಭಿಣಿಯರು ತಮ್ಮ ಹೊಟ್ಟೆಯಲ್ಲಿ ಇರುವ ಮಗುವಿನ ಆರೋಗ್ಯವನ್ನೂ ನೋಡಿಕೊಳ್ಳಬೇಕು.
ಹಾಗಾಗಿ ಮಹಿಳೆಯರು ತಮ್ಮ ಗರ್ಭಾವಸ್ಥೆ ಸಮಯದಲ್ಲಿ ಮೂಲಂಗಿ ಬಳಸುವುದು ತುಂಬಾ ಉಪಯುಕ್ತ. ಇದರಿಂದ ಗರ್ಭದಲ್ಲಿರುವ ಮಗುವಿಗೂ ಒಳ್ಳೆಯದು. ಹೆಚ್ಚು ಫೈಬರ್ ಅಂಶ ಇದ್ದು, ಪೇರಿಸ್ಟಾಲಿಸಿಸ್ ಕಾರ್ಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಭ್ರೂಣದ ಅಥವಾ ಮಗುವಿನ ಮೂಳೆ ಬೆಳವಣಿಗೆಯನ್ನು ಉತ್ತೇಜಿಸುವುದಕ್ಕೆ ಬೇಕಾಗುವ ಕ್ಯಾಲ್ಸಿಯಂ, ಪೊಟ್ಯಾಷಿಯಂ ಇತರ ಖನಿಜಾಂಶಗಳು ಮೂಲಂಗಿಯಲ್ಲಿ ಇವೆ. ಈ ತರಕಾರಿಯಲ್ಲಿ ವಿಟಮಿನ್ ಸಿ ಮತ್ತು ಸತುವಿನ ಅಂಶ ಸಮೃದ್ಧವಾಗಿದೆ. ಮಗುವಿಗೆ ಜಾಂಡೀಸ್ ಬರದಂತೆ ಇದು ತಡೆಯುತ್ತದೆ.