ಪುನರ್ಪುಳಿ ಜ್ಯೂಸ್ ಇಷ್ಟಪಡದವರು ಯಾರು ಹೇಳಿ. ಅದರಲ್ಲೂ ಬೇಸಿಗೆಯ ಬೇಗೆಯಿಂದ ದೇಹವನ್ನು ತಂಪಾಗಿಸುವ ಜೊತೆಗೆ ಹಲವು ಆರೋಗ್ಯದ ಲಾಭಗಳನ್ನೂ ಪಡೆಯಬೇಕೆಂದಿದ್ದರೆ ನೀವು ನಿತ್ಯ ಪುನರ್ಪುಳಿ ಜ್ಯೂಸ್ ಕುಡಿಯುವುದು ಒಳ್ಳೆಯದು.
ಇದರ ಸೇವನೆಯಿಂದ ನೀವು ಸಿಟ್ರಿಕ್ ಆಮ್ಲ, ವಿಟಮಿನ್ ಬಿ ಮತ್ತು ಪೊಟ್ಯಾಸಿಯಂ ಅನ್ನು ಪಡೆಯಬಹುದು. ಗರ್ಭಿಣಿಯರು ಇದರ ಸಾರು ಅಥವಾ ಜ್ಯೂಸ್ ಕುಡಿಯುವುದರಿಂದ ಮಗುವಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಪುನರ್ಪುಳಿ ಸೇವನೆಯಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಕಾರಣ ವಯಸ್ಸಾದವರು ಹಾಗೂ ಮಕ್ಕಳು ಇದನ್ನು ಧಾರಾಳವಾಗಿ ಸೇವಿಸಬಹುದು.
ಹಿಮ್ಮಡಿ ಒಡೆಯುವ, ತ್ವಚೆಯಲ್ಲಿ ತುರಿಕೆ ಹಾಗೂ ಬಿರುಕು ಬಿಡುವ ಸಮಸ್ಯೆಯನ್ನು ನಿವಾರಿಸಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಡುತ್ತದೆ. ಹಾಗಾಗಿ ಪುನರ್ಪುಳಿ ಹಣ್ಣುಗಳು ಸಿಕ್ಕಾಗ ಅದನ್ನು ಮನೆಗೆ ತಂದು ಒಣಗಿಸಿಡಿ. ವರ್ಷದ ತನಕ ಹಾಳಾಗದೇ ಉಳಿಯುವ ಇವು ಅಡುಗೆ ಮನೆಯಲ್ಲಿ ಆಪದ್ಭಾಂಧವನಾಗುತ್ತದೆ.