ಫಿರೋಜಾಬಾದ್ : ರಾಮಮಂದಿರ ಉದ್ಘಾಟನೆ ದಿನವೇ ಮುಸ್ಲಿಂ ಮಹಿಳೆಯೊಬ್ಬರು ಸೋಮವಾರ ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ರಾಮ್ ರಹೀಮ್ ಎಂದು ಹೆಸರಿಟ್ಟಿದ್ದಾರೆ.
ಜಿಲ್ಲಾ ಮಹಿಳಾ ಆಸ್ಪತ್ರೆಯ ಉಸ್ತುವಾರಿ ಡಾ.ನವೀನ್ ಜೈನ್ ಮಾತನಾಡಿ, ಫರ್ಜಾನಾ ಎಂಬ ಮಹಿಳೆ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಡಾ.ಜೈನ್ ತಿಳಿಸಿದ್ದಾರೆ.
ಮಗುವಿನ ಅಜ್ಜಿ ಹುಸ್ನಾ ಬಾನು ಮಗುವಿಗೆ ರಾಮ್ ರಹೀಮ್ ಎಂದು ಹೆಸರಿಟ್ಟಿದ್ದಾರೆ. ಹಿಂದೂ-ಮುಸ್ಲಿಂ ಏಕತೆಯ ಸಂದೇಶವನ್ನು ನೀಡಲು ಮಗುವಿಗೆ ರಾಮ್ ರಹೀಮ್ ಎಂದು ಹೆಸರಿಟ್ಟಿದ್ದೇನೆ ಎಂದು ಬಾನು ಹೇಳಿದರು. ಮಗುವಿನ ಅಜ್ಜಿ ಹುಸ್ನಾ ಬಾನು ಮಗುವಿಗೆ ರಾಮ್ ರಹೀಮ್ ಎಂದು ಹೆಸರಿಟ್ಟಿದ್ದಾರೆ.