ಮೆಕ್ಸಿಕೋದಲ್ಲಿ ಗುರುತ್ವಾಕರ್ಷಣೆಯ ಬಲವು ಕಾರ್ಯನಿರ್ವಹಿಸದಿರುವ ಸ್ಥಳವೊಂದಿದೆ ಅಥವಾ ಹಾಗೆ ತೋರುತ್ತದೆ. ಗುರುತ್ವಾಕರ್ಷಣೆಯ ನಿಯಮವನ್ನು ಧಿಕ್ಕರಿಸುವ ರಸ್ತೆಯ ವಿಡಿಯೊ ನೆಟ್ಟಿಗರನ್ನು ಬೆರಗುಗೊಳಿಸಿವೆ.
ನಂಬಲಾಗದ ಅದರ ಹಿಂದಿನ ರಹಸ್ಯವನ್ನು ತಿಳಿಯಲು ಪ್ರಯತ್ನಿಸುವುದಾದರೆ, ವೀಡಿಯೊ ವಾಸ್ತವವಾಗಿ ಮೆಕ್ಸಿಕೊದ ಸಣ್ಣ ಪಟ್ಟಣವಾದ ಕ್ಯಾನ್‌ಕುನ್‌ನಲ್ಲಿರುವ ಕ್ಸೆನ್ಸ್‌ಸ್ ಎಂಬ ಮಾನವ ನಿರ್ಮಿತ ಉದ್ಯಾನವನದ್ದು.
ಮೊದಲ ನೋಟದಲ್ಲಿ, ಈ ಸ್ಥಳವು ಒಂದು ಸಣ್ಣ ಪಟ್ಟಣದಂತೆ ಕಾಣುತ್ತದೆ, ಮತ್ತೊಮ್ಮೆ ನೋಡಿದಾಗ, ಗುರುತ್ವಾಕರ್ಷಣೆಯ ನಿಯಮಗಳು ಪ್ರದೇಶದಲ್ಲಿ ವರ್ಕ್ ಆಗಲ್ಲ ಎಂದು ತೋರುತ್ತದೆ.
ಇದು ಮಾನವ ನಿರ್ಮಿತ ಗ್ರಾವಿಟಿ ಬೆಟ್ಟವಾಗಿದ್ದು, ಅದು ಆಪ್ಟಿಕಲ್ ಇಲ್ಯೂಷನ್ ಆಧಾರದಲ್ಲಿ ಕೆಲಸ ಮಾಡುತ್ತದೆ. ಚರಂಡಿ ನೀರು ಇಳಿಜಾರಿಗೆ ವಿರುದ್ಧವಾಗಿ ಹರಿಯುವಿಕೆಯಂತೆ ಕಾಣುತ್ತದೆ. ಇದು ಕೇವಲ ಭ್ರಮೆಯಾಗಿದೆ.