ಜಪಾನ್ಗೆ ಆಗಮಿಸಿದ ಬಳಿಕ ಕೊರೊನಾ ಪಾಸಿಟಿವ್ ವರದಿ ಪಡೆದ ಉಗಾಂಡಾದ ಒಲಿಂಪಿಕ್ ತಂಡದವರಲ್ಲಿ ಡೆಲ್ಟಾ ರೂಪಾಂತರಿ ಕಂಡುಬಂದಿದೆ ಎಂದು ಜಪಾನ್ ಒಲಿಂಪಿಕ್ ಸಚಿವೆ ಹೇಳಿದ್ದಾರೆ. ಒಲಿಂಪಿಕ್ ಆರಂಭಕ್ಕೆ 1ತಿಂಗಳಿಗಿಂತಲೂ ಕಡಿಮೆ ಇರುವಾಗ ಈ ರೀತಿ ಹೊಸ ರೂಪಾಂತರಿ ಕಂಡು ಬಂದಿರೋದು ಆತಂಕಕ್ಕೆ ಕಾರಣವಾಗಿದೆ.
ಆಫ್ರಿಕನ್ ರಾಷ್ಟ್ರ ನಿಯೋಗದ ತರಬೇತುದಾರ ಜಪಾನ್ಗೆ ಆಗಮಿಸಿದ ಬಳಿಕ ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಪಡೆದಿದ್ದರು. ಇದಾದ ಬಳಿಕ ಇನ್ನೊಬ್ಬ ಸದಸ್ಯ, ಕ್ರೀಡಾಪಟು ಸೇರಿದಂತೆ ಇನ್ನೂ ಕೆಲವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಮದುವೆ ಸಂಭ್ರಮದಲ್ಲಿದ್ದ ವರನಿಗೆ ಮೊದಲ ದಿನವೇ ಕಾದಿತ್ತು ʼಶಾಕ್ʼ
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಪಾನ್ ಒಲಿಂಪಿಕ್ ಸಚಿವೆ ಟಮಾಯಾ ಮರುಕವಾ, ಶನಿವಾರ ಉಗಾಂಡಾದಿಂದ ಬಂದ ಒಲಿಂಪಿಕ್ ತಂಡದ ಸದಸ್ಯರಲ್ಲಿ ಡೆಲ್ಟಾ ರೂಪಾಂತರಿ ಕಂಡು ಬಂದಿದೆ. ಇನ್ನೊಂದು ಪಾಸಿಟಿವ್ ಕೇಸ್ ಬಗ್ಗೆ ಅಧ್ಯಯನ ಮುಂದುವರಿದಿದೆ ಎಂದು ಹೇಳಿದ್ರು.
ಪುಸ್ತಕ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ
ಜಪಾನ್ನಲ್ಲಿ ಕೊರೊನಾ ನಾಲ್ಕನೇ ಅಲೆ ಇದ್ದರೂ ಸಹ ಕೊರೊನಾ ಹೆಮ್ಮಾರಿಯಿಂದ ಈ ದೇಶ ಅತಿಯಾದ ಹೊಡೆತ ತಿಂದಿಲ್ಲ. ಕೊರೊನಾ ಲಸಿಕೆಯ ಅಭಿಯಾನಕ್ಕೆ ಚುರುಕು ನೀಡಿದ ಜಪಾನ್ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಸಾಧಿಸುವಲ್ಲಿ ಯಶಸ್ವಿಯಾಗಿದೆ.