ಲೈಂಗಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಅನೇಕರು ವಯಾಗ್ರದ ಬಳಕೆ ಮಾಡ್ತಾರೆ. ವಯಾಗ್ರ ಬಳಸುವ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ತನ್ನ ನೋವನ್ನು ಹಂಚಿಕೊಂಡಿದ್ದಾನೆ. ವಯಾಗ್ರ ಸೇವನೆಯಿಂದಾಗಿ ತನಗೆ ಮಕ್ಕಳಾಗ್ತಿಲ್ಲವೆಂದು ಆತ ಹೇಳಿದ್ದಾನೆ.
50 ವರ್ಷದ ವ್ಯಕ್ತಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಿಂದ ಬಳಲುತ್ತಿದ್ದಾನಂತೆ. ಹಾಗಾಗಿ ವಯಾಗ್ರದ ಬಳಕೆ ಮಾಡ್ತಿದ್ದಾನಂತೆ. ಮದುವೆಯಾಗಿ 10 ವರ್ಷವಾಗಿದೆ. ಎಷ್ಟೇ ಪ್ರಯತ್ನಿಸಿದ್ರೂ ಮಕ್ಕಳಾಗಿಲ್ಲ. ಪತ್ನಿಗೆ ಸಮಸ್ಯೆಯಿದೆ ಎಂದು ವೈದ್ಯರು ಹೇಳಿದ್ದರು. ಅದ್ರ ಚಿಕಿತ್ಸೆ ಪೂರ್ಣಗೊಂಡಿದೆ. ಈಗ ಆಕೆಗೆ ಯಾವುದೇ ಸಮಸ್ಯೆಯಿಲ್ಲವೆಂದು ವೈದ್ಯರು ಹೇಳಿದ್ದಾರೆ.
ವಯಾಗ್ರವೇ ಇದಕ್ಕೆ ಕಾರಣವೆಂಬುದು ನನ್ನ ಅಭಿಪ್ರಾಯ. ಇದು ನನ್ನ ದೊಡ್ಡ ಚಿಂತೆಗೆ ಕಾರಣವಾಗಿದೆ ಎಂದಿದ್ದಾನೆ. ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ವಯಾಗ್ರ ಸೇವನೆ ಮೊದಲು ವೈದ್ಯರ ಸಲಹೆ ಪಡೆಯದೇ ಹೋಗಿದ್ದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಿರಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಮಹಿಳೆ ಹಾಗೂ ಪುರುಷರ ಸಂತಾನೋತ್ಪತ್ತಿ ಮೇಲೆ ವಯಾಗ್ರ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಯಾವುದೇ ಪುರಾವೆಯಿಲ್ಲವೆಂದು ಅವರು ಹೇಳಿದ್ದಾರೆ.