ಬನಿಯನ್ ನಲ್ಲೇ ONLINE ವಿಚಾರಣೆಗೆ ಹಾಜರಾದ ಕಕ್ಷಿದಾರ; ಸಿಡಿಮಿಡಿಗೊಂಡ ನ್ಯಾಯಾಧೀಶರು 08-07-2024 7:38PM IST / No Comments / Posted In: Latest News, India, Live News ಭಾರತದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಕೋರ್ಟ್ ನಂ.11ರಲ್ಲಿ ನಡೆದ ವಿಚಾರಣೆ ವೇಳೆ ವ್ಯಕ್ತಿಯೊಬ್ಬ ಬನಿಯನ್ ಧರಿಸಿ ವಿಚಾರಣೆಯಲ್ಲಿ ಉಪಸ್ಥಿತನಿದ್ದ. ವ್ಯಕ್ತಿಯನ್ನು ನೋಡ್ತಿದ್ದಂತೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಕೋಪ ನೆತ್ತಿಗೇರಿತು. ತಕ್ಷಣ ಆ ವ್ಯಕ್ತಿಯನ್ನು ಹೊರ ಹಾಕುವಂತೆ ಆದೇಶ ನೀಡಿದ್ರು. ವಿಚಾರಣೆ ವೇಳೆ ಎರಡೂ ಕಡೆಯ ಜನರನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂಪರ್ಕಿಸಲಾಗಿತ್ತು. ಈ ವೇಳೆ ಬನಿಯನ್ ಧರಿಸಿದ್ದ ವ್ಯಕ್ತಿಯೊಬ್ಬ ವಿಡಿಯೋ ಕಾನ್ಫರೆನ್ಸ್ ಗೆ ಸೇರಿಕೊಂಡ. ಇದನ್ನು ಕಂಡ ನ್ಯಾಯಾಧೀಶೆ ಬಿ.ವಿ. ನಾಗರತ್ನ ಅವರು, ಬನಿಯನ್ ಧರಿಸಿ ಬಂದವರು ಯಾರು ಎಂದು ಪ್ರಶ್ನೆ ಮಾಡಿದರು. ಈತ ಯಾವುದಾದ್ರೂ ಗುಂಪಿಗೆ ಸೇರಿದ ವ್ಯಕ್ತಿಯೇ ಅಥವಾ ಬೇರೆಯೇ ಎಂದು ನ್ಯಾಯಮೂರ್ತಿ ದೀಪಂಕರ್ ಶರ್ಮಾ ಕೇಳಿದ್ರು. ಇದಾದ ಬಳಿಕ ನ್ಯಾಯಮೂರ್ತಿ ನಾಗರತ್ನ, ಆ ವ್ಯಕ್ತಿಯನ್ನು ಹೊರ ಹಾಕುವಂತೆ ಕೋರ್ಟ್ ಮಾಸ್ಟರ್ ಗೆ ಆದೇಶಿಸಿದರು. ಹೀಗೆ ಮಾಡಲು ಹೇಗೆ ಸಾಧ್ಯ, ಅವರನ್ನು ವಿಡಿಯೋ ಕಾನ್ಫರೆನ್ಸ್ ನಿಂದ ಹೊರಗೆ ಹಾಕಿ ಎಂದು ನಾಗರತ್ನ ಆದೇಶ ನೀಡಿದರು. ಸುಪ್ರೀಂ ಕೋರ್ಟ್‌ನಲ್ಲಿ ಇಂತಹ ಪ್ರಕರಣ ಇದೇ ಮೊದಲಲ್ಲ. 2020 ರಲ್ಲಿ ವಕೀಲರೊಬ್ಬರು ಶರ್ಟ್ ಇಲ್ಲದೆ ವೀಡಿಯೊ ಕಾನ್ಫರೆನ್ಸಿಂಗ್ ಹಾಜರಾಗಿದ್ದರು. #supremecourt #courtroomexchange A person joins the Video Conference of Court 11 in Innerwears Justice BV Nagarathna: Who is this appearing in baniyan? Justice Dutta: Is he a party or anyone? Nagarathna J: Throw him out, remove him. How can this be done? Please remove him… pic.twitter.com/lJQ5ku3HwL — Bar and Bench (@barandbench) July 8, 2024