ಜವ್ರು ಕಣಿವೆಯಲ್ಲಿನ ಅತ್ಯಾಕರ್ಷಕ ಜಲಪಾತದ ವಿಡಿಯೋವನ್ನು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದೊಂದು ವಿಹಂಗಮ ನೋಟ, ಪುನರುಜ್ಜೀವನಗೊಳಿಸುವ ವಾತಾವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಅದ್ಭುತ ಎಂದು ಅವರು ಹೇಳಿದ್ದಾರೆ. ನಮ್ಮ ಪ್ರಾಚೀನ ದಿಬಾಂಗ್ ಕಣಿವೆಯಲ್ಲಿ ಪ್ರಕೃತಿ ಮಾತೆಯ ಮಡಿಲಲ್ಲಿ ಇರುವ ಮೂಲಕ ನೀವು ಹೊಸ ವರ್ಷವನ್ನು ಸ್ವಾಗತಿಸಬೇಕು. ಒಮ್ಮೆ ಇಲ್ಲಿಗೆ ಬಂದು ಇದರ ಸವಿಯನ್ನು ಸವಿಯಿರಿ ಎಂದು ಅವರು ಹೇಳಿದ್ದಾರೆ.
#DekhoApnaDesh ಅಭಿಯಾನವನ್ನು ಪ್ರಚಾರ ಮಾಡಲು ಪೇಮಾ ಖಂಡು ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ಅರುಣಾಚಲ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಇವರು ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಜಲಪಾತದ ಬಳಿ ಪ್ರಯಾಣಿಕನೊಬ್ಬ ಮೈಮರೆತಿರುವುದನ್ನು ನೋಡಬಹುದು. ಇದು ಇತರ ಜಲಪಾತಗಳಿಗಿಂತ ಭಿನ್ನವಾಗಿ ಹಾಲಿನ ಬಿಳಿ ಬಣ್ಣದಲ್ಲಿದೆ. ಈ ವಿಡಿಯೋ ಇದಾಗಲೇ 20 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
“ಸಚಿವರೊಬ್ಬರು ಸಕಾರಾತ್ಮಕ ಪ್ರಭಾವದಲ್ಲಿ ತೊಡಗಿರುವುದನ್ನು ನೋಡಲು ಸಂತೋಷವಾಗಿದೆ, ಎಲ್ಲವೂ ರಾಜಕೀಯವಾಗಿರಬೇಕಾಗಿಲ್ಲ. ಇದು ಜನರಿಗೆ ಸೇವೆಯನ್ನೂ ನೀಡುತ್ತಿದೆ“ ಎಂದು ಕಮೆಂಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ತಾವು ಇಲ್ಲಿ ಭೇಟಿ ನೀಡಬೇಕು ಎಂದು ಹಲವರು ಹೇಳಿದ್ದಾರೆ.