
ಲಕ್ನೋ: ಉತ್ತರಪ್ರದೇಶ 43 ವರ್ಷದ ವೈದ್ಯರೊಬ್ಬರು ವ್ಯಾಯಾಮ ಮಾಡುವಾಗ ಜಿಮ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಮೃತರನ್ನು ಸಂಜೀವ್ ಪಾಲ್ ಎಂದು ಗುರುತಿಸಲಾಗಿದೆ. ಬಾರಾಬಂಕಿ ಜಿಲ್ಲೆಯಲ್ಲಿ ಶುಕ್ರವಾರ ಘಟನೆ ನಡೆದಿದೆ. ವಿಕಾಸ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಟಾಟಾ ಮೋಟಾರ್ ಬಳಿ ಇರುವ ಜಿಮ್‌ನಲ್ಲಿ ವೈದ್ಯ ಸಾವನ್ನಪ್ಪಿದ್ದಾರೆ. ಡಾ. ಸಂಜೀವ್ ಪಾಲ್ ಅವರು ತಮ್ಮ ತಾಲೀಮು ಅವಧಿಯಲ್ಲಿಯೇ ನಿಧನರಾದರು. ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದ್ದು ಅಲ್ಲಿಯೇ ಕುಸಿದುಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.