ತುಟಿ ರಂಗು ಹೆಚ್ಚಿಸುವ ಲಿಪ್ಸ್ಟಿಕ್ ಹೆಣ್ಣುಮಕ್ಕಳ ಅಚ್ಚುಮೆಚ್ಚು. ಅನೇಕ ಹುಡುಗಿಯರು ಮ್ಯಾಚಿಂಗ್ ಲಿಪ್ಸ್ಟಿಕ್ ಬಳಕೆ ಮಾಡ್ತಾರೆ. ಪ್ರತಿ ದಿನ ಲಿಪ್ಸ್ಟಿಕ್ ಹಚ್ಚುವ ಹುಡುಗಿಯರು ಅದ್ರಿಂದಾಗುವ ಸೈಡ್ ಇಫೆಕ್ಟ್ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಲಿಪ್ಸ್ಟಿಕ್ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಆಹಾರ ಸೇವನೆ ಮಾಡುವಾಗ ಲಿಪ್ಸ್ಟಿಕ್ ದೇಹ ಸೇರುತ್ತದೆ. ಇದ್ರಲ್ಲಿರುವ ಹಾನಿಕಾರಕ ರಾಸಾಯನಿಕಗಳು ಜೀರ್ಣಾಂಗದ ಮೇಲೆ ಪರಿಣಾಮ ಬೀರುತ್ತದೆ. ಲಿಪ್ಸ್ಟಿಕ್ ನಲ್ಲಿರುವ ಮ್ಯಾಂಗನೀಸ್, ಕ್ಯಾಡ್ಮಿಯಮ್, ಕ್ರೋಮಿಯಂ ಮತ್ತು ಅಲ್ಯೂಮಿನಿಯಂ ಹೊಟ್ಟೆಯೊಳಗೆ ಸೇರಿದರೆ ಅದರಿಂದ ಅಪಾಯ ಹೆಚ್ಚು.
ಲಿಪ್ಸ್ಟಿಕ್ ಖರೀದಿಸುವ ಮೊದಲು ಅದ್ರ ಗುಣಮಟ್ಟದ ಬಗ್ಗೆ ಗಮನ ನೀಡಬೇಕು. ಲಿಪ್ಸ್ಟಿಕ್ ಕಂಪನಿ, ಕ್ವಾಲಿಟಿ ನೋಡಿ ಖರೀದಿ ಮಾಡಿ. ಅಧಿಕ ಲಿಪ್ಸ್ಟಿಕ್ ಬಳಕೆಯಿಂದ ರಕ್ತದೊತ್ತಡ ಮತ್ತು ಹೃದಯ ಸಮಸ್ಯೆ ಕಾಡುವ ಸಾಧ್ಯತೆಯಿದೆ. ಇದು ಕ್ಯಾನ್ಸರ್ ಗೂ ಕಾರಣಗುತ್ತದೆ. ಸ್ತನ ಕ್ಯಾನ್ಸರ್ ಸಮಸ್ಯೆ ಮಹಿಳೆಯರಲ್ಲಿ ಕಂಡುಬರುತ್ತದೆ.
ಲಿಪ್ಸ್ಟಿಕ್ ಉಪಯೋಗಿಸುವ ಮುನ್ನ ಈ ವಿಷಯಗಳು ಗಮನದಲ್ಲಿರಲಿ :
ಡಾರ್ಕ್ ಶೇಡ್ ಲಿಪ್ಸ್ಟಿಕ್ ಗಳನ್ನ ಆದಷ್ಟು ಕಡಿಮೆ ಉಪಯೋಗಿಸಿ. ಇದರಲ್ಲಿ ಕೆಮಿಕಲ್ಸ್ ಪ್ರಮಾಣ ಹೆಚ್ಚಿರುತ್ತದೆ.
ಲಿಪ್ಸ್ಟಿಕ್ ಹಚ್ಚಿಕೊಳ್ಳುವ ಮೊದಲು ತುಪ್ಪ ಅಥವಾ ಪೆಟ್ರೊಲಿಯಂ ಜೆಲ್ಲಿ ಉಪಯೋಗಿಸಿ ಇದರಿಂದ ಅಡ್ಡ ಪರಿಣಾಮ ಕಡಿಮೆ ಆಗುತ್ತದೆ.
ಅಗ್ಗವಾಗಿರುವ ಲಿಪ್ಸ್ಟಿಕ್ ನಿಂದ ಅಪಾಯದ ಪ್ರಮಾಣ ಹೆಚ್ಚು.