ಬಾಗಲಕೋಟೆ: ಬೆಂಗಳೂರು ಮಾದರಿಯಲ್ಲಿ ರಾಜ್ಯಾದ್ಯಂತ ನಿವೇಶನಗಳಿಗೆ ಎ ಖಾತಾ, ಬಿ ಖಾತಾ ಆರಂಭಿಸಲಾಗುವುದು. ಇದರಿಂದ ಅನಧಿಕೃತ ನಿವೇಶನಗಳಿಗೆ ಶಾಶ್ವತ ಕಡಿವಾಣ ಬೀಳುತ್ತದೆ ಎಂದು ಪೌರಾಡಳಿತ ರಹೀಂ ಖಾನ್ ತಿಳಿಸಿದ್ದಾರೆ.
ನಗರ, ಪಟ್ಟಣ ಪ್ರದೇಶಕ್ಕೆ ಹೊಂದಿಕೊಂಡಿರುವ ಭೂ ಪರಿವರ್ತನೆಗಾಗಿ ಮನೆ, ನಿವೇಶನ ಸೇರಿ ಬಡಾವಣೆ ನಿರ್ಮಿಸಿದ್ದರೂ, ಸುಪ್ರೀಂಕೋರ್ಟ್ ಆದೇಶದ ಪರಿಣಾಮ ಕೆಲವು ಕಾರಣಗಳಿಂದ ಅವುಗಳಿಗೆ ಅಧಿಕೃತ ಸಕ್ರಮ ದೊರೆಯುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಅದಿವೇಶನದಲ್ಲಿ ಮಸೂದೆ ಮಂಡಿಸಲಾಗಿದೆ. ಅಲ್ಲಿಯೂ ಅಕ್ರಮ ಸಕ್ರಮ ಕಾಯ್ದೆ ಪಾಸ್ ಆಗಿದೆ. ಈ ಬಗ್ಗೆ ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು. ಕೋರ್ಟ್ ಆದೇಶದ ಪರಿಣಾಮ 2017ರಿಂದ ರಾಜ್ಯದಲ್ಲಿ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಬೆಂಗಳೂರು ಮಾದರಿಯಲ್ಲಿ ರಾಜ್ಯದಾದ್ಯಂತ ನಿವೇಶನಗಳಿಗೆ ಎ ಖಾತಾ, ಬಿ ಖಾತಾ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.