ಮನೆಯಲ್ಲಿರುವ ಎಲ್ಲ ವಸ್ತುಗಳಿಗೆ ಅದರದ್ದೇ ಆದ ಮಹತ್ವವಿದೆ. ಮನೆಯಲ್ಲಿರುವ ಪೊರಕೆ ಕೂಡ ಆರ್ಥಿಕ ಪರಿಸ್ಥಿತಿಯಲ್ಲಿ ತನ್ನದೆ ಪಾತ್ರ ನಿರ್ವಹಿಸುತ್ತದೆ. ಪೊರಕೆ ವ್ಯಕ್ತಿಯೊಬ್ಬನನ್ನು ಲಕ್ಷಾಧಿಪತಿ ಮಾಡಬಹುದು. ಅದೇ ಪೊರಕೆ ಭಿಕ್ಷಾಧಿಪತಿಯನ್ನಾಗಿ ಮಾಡಲೂಬಹುದು.
ಶುಭ ಹಾಗೂ ಅಶುಭ ಶಾಸ್ತ್ರಗಳಲ್ಲಿ ಪೊರಕೆ ಬಗ್ಗೆ ತಿಳಿಸಲಾಗಿದೆ. ಪೊರಕೆಯನ್ನು ಶಾಸ್ತ್ರಕ್ಕೆ ಅನುಸಾರವಾಗಿ ಬಳಸಿದರೆ ಮನೆಗೆ ಒಳ್ಳೆಯದಾಗುತ್ತದೆ. ಪೊರಕೆಯನ್ನು ಲಕ್ಷ್ಮಿಗೆ ಹೋಲಿಸಲಾಗುತ್ತದೆ. ಪೊರಕೆ ಖರೀದಿಸುವುದರಿಂದ ಹಿಡಿದು ಅದನ್ನು ಬಳಸುವ ಸಮಯ ಹಾಗೂ ಅದನ್ನು ಇಡುವ ಸ್ಥಳ ಯಾವುದು ಎಂಬುದನ್ನು ಶಾಸ್ತ್ರ ಹೇಳುತ್ತೆ.
ನಿಮಗೆ ಬೇಕಾದ ಸಮಯದಲ್ಲಿ ಪೊರಕೆ ಖರೀದಿ ಮಾಡಬೇಡಿ. ಕೃಷ್ಣ ಪಕ್ಷದಲ್ಲಿ ಪೊರಕೆ ಖರೀದಿ ಮಾಡಿ. ಶುಕ್ಲ ಪಕ್ಷದಲ್ಲಿ ಪೊರಕೆ ಖರೀದಿ ಮಾಡುವುದರಿಂದ ದುರಾದೃಷ್ಟ ನಿಮ್ಮದಾಗುತ್ತದೆ.
ಪೊರಕೆಯನ್ನು ಮನೆಯ ಈಶಾನ್ಯ ಕೋಣೆಯಲ್ಲಿ ಎಂದೂ ಇಡಬಾರದು. ಪೊರಕೆಯನ್ನು ನೈಋತ್ಯ ಕೋಣೆಯಲ್ಲಿಡುವುದು ಒಳ್ಳೆಯದು.
ಕಠಿಣ ವಾರದಂದು ಪೊರಕೆಯನ್ನು ಖರೀದಿ ಮಾಡಬೇಕು. ಸೌಮ್ಯ ವಾರಗಳಂದು ಪೊರಕೆಯನ್ನು ಖರೀದಿ ಮಾಡುವುದು ಒಳ್ಳೆಯದಲ್ಲ.
ಬೆಳಿಗ್ಗೆ ಪೊರಕೆಯಿಂದ ಸ್ವಚ್ಛಗೊಳಿಸಬೇಕು. ಸಂಜೆ ಸೂರ್ಯ ಮುಳುಗಿದ ಮೇಲೆ ಪೊರಕೆ ಬಳಸುವುದು ಒಳ್ಳೆಯದಲ್ಲ.
ಕಸ ಗುಡಿಸುವ ವೇಳೆ ಎಂದೂ ಪೊರಕೆಯನ್ನು ಮೆಟ್ಟಬೇಡಿ. ಹಾಗೆ ಮಾಡಿದರೆ ಲಕ್ಷ್ಮಿಯನ್ನು ಕಾಲಿನಿಂದ ಒದ್ದಂತಾಗುತ್ತದೆ.
ಪೊರಕೆಯನ್ನು ಯಾವಾಗಲೂ ಬಚ್ಚಿಡಬೇಕು. ತೆರೆದ ಜಾಗದಲ್ಲಿ ಇಡಬಾರದು.