ಬೆಳಗಾವಿ : ಬೆಳಗಾವಿಯಲ್ಲಿ ಘೋರ ಘಟನೆ ನಡೆದಿದ್ದು, ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಹರಿದು ಯುವಕ ಸಾವನ್ನಪ್ಪಿದ್ದಾನೆ.
ಗಣೇಶ ಉತ್ಸವದ ವೇಳೆ ದುರಂತ ಸಂಭವಿಸಿದ್ದು, ಗಣೇಶ ವಿಸರ್ಜನೆ ಮಾಡುವಾಗ ಟ್ರ್ಯಾಕ್ಟರ್ ಅಡಿ ಸಿಲುಕಿ ಸದಾನಂದ ಚೌಹಾಣ್ ಪಾಟೀಲ್ ಮೃತಪಟ್ಟಿದ್ದಾರೆ.
ಬೆಳಗಾವಿ ಪಾಟೀಲ್ ಗಲ್ಲಿಯಲ್ಲಿ ನಿನ್ನೆ ರಾತ್ರಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.