
ಹಣ್ಣುಗಳನ್ನು ಹಾಗೆಯೇ ತಿನ್ನಲು ಬೇಸರವೇ..?? ಹಾಗಿದ್ದರೆ ಅದರಿಂದ ಆರೋಗ್ಯಕರ ಪಾನೀಯಗಳನ್ನು ಮಾಡಿಕೊಂಡು ಅದರ ಸ್ವಾದವನ್ನು ಇಮ್ಮಡಿಗೊಳಿಸಿಕೊಳ್ಳಿ. ಟೊಮೆಟೋ ಕೇವಲ ಆಹಾರ ತಯಾರಿಕೆಯಲ್ಲಿ ಮಾತ್ರವಲ್ಲ ಅದರಿಂದ ಜ್ಯೂಸ್ ಮಾಡಿಕೊಂಡು ಸಹ ಸೇವಿಸಬಹುದು. ಇದರ ಜೊತೆಗೆ ಸೇಬನ್ನು ಸೇರಿಸಿದರೆ ಅದ್ಭುತ ರುಚಿಯನ್ನು ಮತ್ತು ಎನರ್ಜಿಯನ್ನು ನೀಡುತ್ತದೆ.
ಬೇಕಾಗಿರುವ ಸಾಮಗ್ರಿಗಳು :
ಟೊಮೆಟೊ : 3 ½ ಕಪ್
ಜೇನುತುಪ್ಪ : 3 ಚಮಚ
ಐಸ್ ಕ್ಯೂಬ್ಸ್ : 1 ಕಪ್
ಸೇಬು : 3 ಕಪ್
ಉಪ್ಪು : ರುಚಿಗೆ ತಕ್ಕಷ್ಟು
ಪೆಪ್ಪರ್ ಪೌಡರ್ : ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಮೊದಲು ಟೊಮೆಟೋ ಮತ್ತು ಸೇಬನ್ನು ತೊಳೆದುಕೊಂಡು ಅವುಗಳನ್ನು ಬ್ಲೆಂಡರ್ ನಲ್ಲಿ ಮೃದುವಾಗುವವರೆಗೂ ರುಬ್ಬಿಕೊಳ್ಳಿ. ನಂತರ ಇದನ್ನು ಶೋಧಿಸಿಕೊಂಡು ಇದಕ್ಕೆ ಜೇನುತುಪ್ಪ, ಪೆಪ್ಪರ್ ಪೌಡರ್ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಐಸ್ ಕ್ಯೂಬ್ಸ್ ಹಾಕಿ ಸರ್ವ್ ಮಾಡಿ.