ಬೆಂಗಳೂರು : ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಾಜ್ಯ ಸರ್ಕಾರ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ. ಆಸಕ್ತ ಪೋಷಕರು ತಮ್ಮ ಮಕ್ಕಳನ್ನು ಸ್ಪರ್ಧೆಗೆ ಕಳುಹಿಸಿಕೊಡಬಹುದಾಗಿದೆ.
ಬಾಲ ಭವನ ಸೊಸೈಟಿಯು 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ್ವಾತಂತ್ರ್ಯ ಸಂಭ್ರಮವನ್ನು ಆಯೋಜಿಸಿದೆ. ಈ ಪ್ರಯುಕ್ತ ಆಗಸ್ಟ್ 15 ರಂದು 5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಬೆಂಗಳೂರಿನ ಕಬ್ಬನ್ ಉದ್ಯಾನವನದ ಬಾಲ ಭವನದಲ್ಲಿ ಹಮ್ಮಿಕೊಂಡಿದೆ.
ಸ್ಪರ್ಧೆಗಳಲ್ಲಿ ಆಸಕ್ತ ಮಕ್ಕಳು ದಿನಾಂಕ 30-07-2024 ರಿಂದ 10-08-2024 ರ ಒಳಗೆ ಇಲ್ಲಿ ಕೊಟ್ಟಿರುವ ಸ್ಕ್ಯಾನ್ ಕೋಡ್ನ್ನು ಸ್ಕ್ಯಾನ್ ಮಾಡಿ ಗೂಗಲ್ ಫಾರ್ಮ್ ಭರ್ತಿ ಮಾಡತಕ್ಕದ್ದು ಅಥವಾ ಖುದ್ದಾಗಿ ಬಾಲ ಭವನ ಕಛೇರಿಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದು. (ತಿಂಗಳ ಪ್ರತಿ ಸೋಮವಾರ ಹಾಗೂ 2ನೇ ಮತ್ತು 4ನೇ ಮಂಗಳವಾರದ ರಜಾದಿನಗಳನ್ನು ಹೊರತು ಪಡಿಸಿ) ಮೊದಲು ನೊಂದಣಿ ಮಾಡಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.
* ಬಾಲ ಭವನದ ಸ್ಪರ್ಧೆಗೆ ಸಂಬಂಧಿಸಿದ ಗೂಗಲ್ ಫಾರ್ಮ್ ಭರ್ತಿ ಮಾಡಿದ ಹಾಗೂ ಕಛೇರಿಯಲ್ಲಿ ನೊಂದಣಿ ಮಾಡಿದ ಮಕ್ಕಳಲ್ಲಿ ದಿನಾಂಕ 15-08-2024ರ ಸ್ಪರ್ಧೆಗೆ ಭಾಗವಹಿಸಲು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಮಕ್ಕಳ ವಿವರವನ್ನು ದಿನಾಂಕ 13-08-2024 ರ ಒಳಗೆ ದೂರವಾಣಿ ಮತ್ತು ವಾಟ್ಸಫ್ ಮೂಲಕ ತಿಳಿಸಲಾಗುವುದು. ಸಂಬಂಧಿಸಿದಂತೆ ಯಾವುದೇ ಸಂದೇಶ ಸ್ವೀಕರಿಸದಿದ್ದಲ್ಲಿ ಸ್ಪರ್ಧೆಗೆ ಆಯ್ಕೆಯಾಗಿರುವುದಿಲ್ಲ ಎಂದು ತಿಳಿಯತಕ್ಕದ್ದು.
* ಮೇಲಿನ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಸ್ಪರ್ಧೆ ನಡೆಯುವ ಆಯಸೂಚಿತ ಸ್ಥಳಗಳಲ್ಲಿ ಬೆಳಿಗ್ಗೆ 9: 30ಕ್ಕೆ ಹಾಜರಿರಲು ಕೋರಿದೆ.
* ವಿಜೇತ ಮಕ್ಕಳಿಗೆ ಬಹುಮಾನ ಮತ್ತು ಪ್ರಶಂಸನಾ ಪತ್ರ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ನೀಡಲಾಗುವುದು.
* ನೊಂದಣಿಗೆ ಸಂಬಂಧ ಪಟ್ಟ ಸಮಸ್ಯೆಗಳಿಗೆ/ಸಹಾಯಕ್ಕೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು :080-22864189 / 27259458634 – 9980900335, Email – jbalbhavan@gmail.com.
ವಿಶೇಷ ಮಾಹಿತಿ: ಬಾಲ ಭವನವು 5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಮಕ್ಕಳ ಸದಸ್ಯತ್ವ ಸೌಲಭ್ಯವನ್ನು ವಿಸ್ತರಿಸಿದೆ. ಸದಸ್ಯತ್ವ ಪಡೆದ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರೊಂದಿಗೆ ಪುಟಾಣಿ ರೈಲು ಹಾಗೂ ದೋಣಿ ವಿಹಾರದ ಸೌಲಭ್ಯವನ್ನು ತಿಂಗಳಲ್ಲಿ 1 ಬಾರಿ ಉಚಿತವಾಗಿ ನೀಡಲಾಗುವುದು. ಬೇಸಿಗೆ ಶಿಬಿರ ಹಾಗೂ ವಾರಾಂತ್ಯ ಚಟುವಟಿಕೆಗಳಿಗೆ ಶೇಕಡ 25ರಷ್ಟು ಮತ್ತು ಸದಸ್ಯತ್ವ ಪಡೆದ ಮಕ್ಕಳ ಹುಟ್ಟುಹಬ್ಬ ಆಚರಿಸಲು ನೀಡುವ ಆವರಣಕ್ಕೆ ಶೇಕಡ 50ರಷ್ಟು ಶುಲ್ಕ ರಿಯಾಯಿತಿ ನೀಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಬಾಲ ಭವನ ಕಚೇರಿ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಖುದ್ದಾಗಿ ಬೆಳಿಗ್ಗೆ 10:00 ರಿಂದ ಸಂಜೆ 5:30 ಗಂಟೆಯೊಳಗೆ ಅಥವಾ ದೂರವಾಣಿ ಸಂಖ್ಯೆ : 080-22864189ರ ಮೂಲಕ ಸಂಪರ್ಕಿಸಲು ಕೋರಿದೆ.