ದೀಪಾವಳಿ ಬಂತಂದ್ರೆ ಸಾಕು ಬ್ಯಾಂಕ್‌ಗಳು ಅನೇಕ ಲೋನ್‌ಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡುತ್ತವೆ. ನೀವೇನಾದ್ರೂ ಕಾರ್ ಕೊಂಡುಕೊಳ್ಳಬೇಕು ಅಂತಿದ್ದರೆ ನಿಮಗಿದೋ ಒಂದು ಶುಭ ಸುದ್ದಿ ಇಲ್ಲಿದೆ.
ಹೌದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾರ್ ಖರೀದಿಸುವವರಿಗೆ ರಿಯಾಯಿತಿ ನೀಡಲು ಕೆಲ ಬ್ಯಾಂಕುಗಳು ಮುಂದಾಗಿವೆ. ಜೊತೆಗೆ ಶೋ ರೂಂ ಗಳು ಸಹ ಸಾಕಷ್ಟು ಆಫರ್ ನೀಡಲು ಸಿದ್ದವಾಗಿವೆ.
ಕಾರ್ ಸಾಲ, ಸಂಸ್ಕರಣಾ ಶುಲ್ಕದ ಮೇಲಿನ ರಿಯಾಯಿತಿಗಳು, ಕ್ಯಾಶ್‌ಬ್ಯಾಕ್, ಉಡುಗೊರೆ ಚೀಟಿಗಳು, ಕಡಿಮೆ ಇಎಂಐ ಸೇರಿದಂತೆ ಹಲವಾರು ರಿಯಾಯಿತಿಗಳನ್ನು ನೀಡುತ್ತಿವೆ. ಹಾಗಾದ್ರೆ ಇನ್ಯಾಕೆ ತಡ ನೀವು ಕಾರು, ಐಷಾರಾಮಿ ವಸ್ತುಗಳನ್ನು ಕೊಳ್ಳಬೇಕು ಅಂದರೆ ಈ ಅವಕಾಶಗಳನ್ನು ಉಪಯೋಗಿಸಿಕೊಳ್ಳಬಹುದು.