
ಈ ಸ್ಟಾರ್ ಜೋಡಿ ಜನವರಿ 23 ರಂದು ಮದುವೆಯಾಗಲಿದ್ದು ಸುನಿಲ್ ಶೆಟ್ಟಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಖಂಡಾಲಾದ ಸುನೀಲ್ ಶೆಟ್ಟಿ ಅವರ ತೋಟದ ಮನೆಯು ಅಥಿಯಾ ಶೆಟ್ಟಿ ಮತ್ತು ಕೆ.ಎಲ್. ರಾಹುಲ್ ಅವರ ಮದುವೆಯ ಸ್ಥಳ ಎಂದು ಹೇಳಲಾಗಿದ್ದು, ಮನೆಯನ್ನ ಅಲಂಕಾರ ಮಾಡುತ್ತಿರುವ ವೀಡಿಯೊ ಕಾಣಿಸಿಕೊಂಡಿದೆ.
ಏತನ್ಮಧ್ಯೆ, ಈ ವಾರದ ಆರಂಭದಲ್ಲಿ, ಪಲ್ಲಿ ಹಿಲ್‌ನಲ್ಲಿರುವ ಕೆ.ಎಲ್. ರಾಹುಲ್ ಅವರ ಮುಂಬೈ ನಿವಾಸವನ್ನು ದೀಪಗಳಿಂದ ಅಲಂಕರಿಸಲಾಗಿತ್ತು.
ಆಥಿಯಾ ಶೆಟ್ಟಿ ಮತ್ತು ಕೆ.ಎಲ್. ರಾಹುಲ್ 2019 ರಲ್ಲಿ ಡೇಟಿಂಗ್ ಪ್ರಾರಂಭಿಸಿದ್ದರು. ತದ ನಂತರ ಇಬ್ಬರೂ ಪರಸ್ಪರ ಫೋಟೋ ಗಳನ್ನು ಹಂಚಿಕೊಳ್ಳುತ್ತಾ ಬಾಲಿವುಡ್ ಅಂಗಳ ಸೇರಿದಂತೆ ಕ್ರಿಕೆಟ್ ಅಂಗಳದಲ್ಲಿ ಸುದ್ದಿಯಾಗಿದ್ದರು.
