ಬಾಲಿವುಡ್ ನಟ ಸೈಫ್ ಅಲಿಖಾನ್ ಅವರ ಪೂರ್ವಜರ ಬೃಹತ್ ಅರಮನೆ ‘ಪಟೌಡಿ’ ರಾಜಮನೆತನದ ಪರಂಪರೆ ಮತ್ತು ವಾಸ್ತುಶಿಲ್ಪದ ವೈಭವದ ಸಂಕೇತವಾಗಿದೆ. ಇದರ ಅದ್ದೂರಿ ಒಳಾಂಗಣದ ಅಪರೂಪದ ನೋಟವನ್ನು ಹೋಮ್ ಡೆಕೋರ್ ಜಾಹೀರಾತಿನ ಚಿತ್ರೀಕರಣದಲ್ಲಿ ನಟಿ ಕರೀನಾ ಕಪೂರ್ ಹಂಚಿಕೊಂಡಿದ್ದಾರೆ.
ಬಾಲಿವುಡ್ ತಾರೆ- ಸೈಫ್ ಅಲಿಖಾನ್ ಪತ್ನಿ ಕರೀನಾ ಕಪೂರ್ ಇತ್ತೀಚೆಗೆ ತಮ್ಮ ಪೂರ್ವಜರ ಮನೆಯಾದ ಪಟೌಡಿ ಅರಮನೆಯಲ್ಲಿ ತಮ್ಮ ಅತ್ತೆ ಶರ್ಮಿಳಾ ಟ್ಯಾಗೋರ್ ಅವರೊಂದಿಗೆ ಗುಣಮಟ್ಟದ ಸಮಯವನ್ನು ಆನಂದಿಸುತ್ತಿರುವ ಕ್ಲಿಪ್ ಅನ್ನು ಜಾಹೀರಾತಿನಲ್ಲಿ ಹಂಚಿಕೊಂಡಿದ್ದಾರೆ.
ಕರೀನಾ ಮತ್ತು ಅವರ ಅತ್ತೆ, ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳುವ ಮೊದಲು ತಮ್ಮ ಕೊಠಡಿಗಳಲ್ಲಿ ಸಂತೋಷದಿಂದ ನೃತ್ಯ ಮಾಡುವುದರೊಂದಿಗೆ ಈ ಕ್ಲಿಪ್ ಅರಮನೆಯ ವೈಭವವನ್ನು ತೋರಿಸುತ್ತದೆ. ಕರೀನಾ ಪೋಸ್ಟ್ ಗೆ “ರಾಣಿಯೊಂದಿಗೆ ರೋಲಿಂಗ್ – ರಿಯಲ್ ಟು ರೀಲ್ ಲೈಫ್.” ಎಂದು ಶೀರ್ಷಿಕೆ ನೀಡಿದ್ದಾರೆ.
800 ಕೋಟಿ ರೂಪಾಯಿ ಮೌಲ್ಯದ ಪಟೌಡಿ ಅರಮನೆಯು ಭಾರತದ ರಾಜಮನೆತನ ಪಟೌಡಿ ಕುಟುಂಬದ ಪೂರ್ವಜರ ಮನೆ. ಹರಿಯಾಣದ ಗುರ್ಗಾಂವ್ ಜಿಲ್ಲೆಯ ಪಟೌಡಿ ಪಟ್ಟಣದಲ್ಲಿ ಇರುವ ಈ ಅರಮನೆಯನ್ನು ಇಬ್ರಾಹಿಂ ಕೋಠಿ ಎಂದೂ ಕರೆಯುತ್ತಾರೆ. 10 ಎಕರೆ ಪ್ರದೇಶದಲ್ಲಿರುವ ಈ ಅರಮನೆಯು 150 ಕೊಠಡಿಗಳನ್ನು ಹೊಂದಿದೆ. ಇದರಲ್ಲಿ 7 ಡ್ರೆಸ್ಸಿಂಗ್ ಕೊಠಡಿಗಳು, 7 ಮಲಗುವ ಕೋಣೆಗಳು, 7 ಬಿಲಿಯರ್ಡ್ ಕೊಠಡಿಗಳು, ಅನೇಕ ಡ್ರಾಯಿಂಗ್ ಕೊಠಡಿಗಳು ಮತ್ತು ವಿಶಾಲವಾದ ಊಟದ ಕೊಠಡಿಗಳು ಸೇರಿವೆ.
ಪಟೌಡಿ ಅರಮನೆಯು ಪ್ರಸಿದ್ಧ ಖಾನ್ ಕುಟುಂಬಕ್ಕೆ ನೆಲೆಯಾಗಿದೆ. ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್ ಮತ್ತು ಅವರ ಮಕ್ಕಳು ಶರ್ಮಿಳಾ ಟ್ಯಾಗೋರ್, ಸೋಹಾ ಅಲಿ ಖಾನ್ ಸೇರಿದಂತೆ ಕುಟುಂಬ ಸದಸ್ಯರು ಇರುತ್ತಾರೆ.
ಪಟೌಡಿ ಅರಮನೆಯ ಸಭಾಂಗಣಗಳು ರಾಜವೈಭವ ಮತ್ತು ಸೊಬಗನ್ನು ಸಾರುತ್ತವೆ. ಬೃಹತ್,ಅದ್ಭುತ ಶೈಲಿಯ ಡೈನಿಂಗ್ ಹಾಲ್ ಕಣ್ಮನ ಸೆಳೆಯುತ್ತದೆ. ಹಸಿರಿನಿಂದ ಕಂಗೊಳಿಸುವ ಉದ್ಯಾನದಲ್ಲಿ ಸೈಫ್ ಅಲಿಖಾನ್ ಕುಟುಂಬವು ಸಾಮಾನ್ಯವಾಗಿ ಪಾರ್ಟಿಗಳನ್ನು ಆಯೋಜಿಸುತ್ತದೆ. ಪಟೌಡಿ ಅರಮನೆಯೊಳಗೆ ಮನ್ಸೂರ್ ಅಲಿ ಖಾನ್ ಪಟೌಡಿಯ ಸಮಾಧಿ ಇದೆ.