ನವದೆಹಲಿ: ಹಿಜಾಬ್ ವಿವಾದದ ಕುರಿತು ಮಾತನಾಡಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಹಿಜಾಬ್ ಧರಿಸಿದ ಹುಡುಗಿ ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದಾರೆ.
ಹೆಣ್ಣುಮಕ್ಕಳು ತನ್ನ ಪೋಷಕರಿಗೆ ತಾನು ಹಿಜಾಬ್ ಧರಿಸಲು ಬಯಸುತ್ತೇನೆ ಎಂದು ಹೇಳಿದರೆ, ಪೋಷಕರು ಯಾವಾಗಲೂ ಅವಳನ್ನು ಬೆಂಬಲಿಸುತ್ತಾರೆ. ಅವರು ತಮ್ಮ ಹಕ್ಕನ್ನು ರಕ್ಷಿಸಲು ಇದ್ದಾರೆ ಎಂದು ಅವರು ಹೇಳುತ್ತಾರೆ ಎಂದು ಅಸಾದುದ್ದೀನ್ ಓವೈಸಿ ತಿಳಿಸಿದ್ದಾರೆ.
ಅವರು ಹಿಜಾಬ್ ಧರಿಸಿ ಕಾಲೇಜಿಗೆ ಹೋಗುತ್ತಾರೆ, ಅವರು ಡಾಕ್ಟರ್, ಎಸ್‌ಡಿಎಂ ಕಲೆಕ್ಟರ್ ಆಗುತ್ತಾರೆ ಎಂದು ಒವೈಸಿ ಹೇಳಿದರು, ನನ್ನ ಮಾತುಗಳನ್ನು ನೆನಪಿಡಿ, ಹಿಜಾಬ್ ಧರಿಸಿದ ಮಹಿಳೆ ಮುಂದೊಂದು ದಿನ ಈ ದೇಶದ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದಾರೆ.
ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಓವೈಸಿ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಇದನ್ನು ಹೇಳಿದ್ದಾರೆ.
ಶುಕ್ರವಾರ, ಎಐಎಂಐಎಂ ಮಹಾರಾಷ್ಟ್ರದಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ ಬೆಂಬಲಿಸಿ ಬ್ಯಾನರ್‌ಗಳನ್ನು ಹಾಕಿತ್ತು. ಕರ್ನಾಟಕದ ಮುಸ್ಕಾನ್ ಖಾನ್ ಅವರ ಹಿಜಾಬ್ ಘಟನೆಯ ಬಗ್ಗೆ ಓವೈಸಿ ಮೆಚ್ಚುಗೆ ಮಾತುಗಳನ್ನಾಡಿದ್ದರು.