ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆಯ ಅಬ್ಬರಕ್ಕೆ ಜನ ಜೀವನ ನಲುಗಿಹೋಗಿದೆ. ಜೀವಹಾನಿಯಾಗಿದ್ದು, ಆಸ್ತಿಪಾಸ್ತಿ ನಷ್ಟವಾಗಿದೆ. ಅಮರನಾಥ ಯಾತ್ರೆಯಲ್ಲಿ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ನಡೆದ ಒಂದು ಘಟನೆಯಲ್ಲಿ ನಾಲ್ಕು ಫ್ಲೋರ್‌ನ ಕಟ್ಟಡ ಏಕಾಏಕಿ ನೆಲಕ್ಕುರುಳಿದ್ದು ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಚೋಪಲ್ ಪಟ್ಟಣದಲ್ಲಿ ಯುಕೋ ಬ್ಯಾಂಕ್ ಶಾಖೆ ಇದ್ದ ಕಟ್ಟಡದಲ್ಲಿ ಹಲವು ಮಳಿಗೆ ಇದ್ದವು. ಅಪಾರ ಮಳೆಯಿಂದ ಭೂಮಿ ಕುಸಿತ ಉಂಟಾಗಿ ಕಟ್ಟಡ ಉರುಳಿದೆ. ಕಟ್ಟಡ ಉರುಳುವಾಗ ಪ್ರತ್ಯಕ್ಷದರ್ಶಿಗಳ ಚೀತ್ಕಾರ, ಆತಂಕದ ದನಿ ವಿಡಿಯೋದಲ್ಲಿ ಕೇಳಿಸುತ್ತದೆ.
ಹಿಮಾಚಲಪ್ರದೇಶ ಸರ್ಕಾರವು ಪರಿಸರಕ್ಕೆ ಧಕ್ಕೆಯಾಗುವಂತೆ ಹೈಡ್ರೋ ಯೋಜನೆಗೆ ಅನುಮತಿ ನೀಡಿದ್ದು, ರಸ್ತೆಗಳ ನಿರ್ಮಾಣ ಇಂತಹ ಘಟನೆಗೆ ಕಾರಣ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಘಟನೆ ನಡೆದಾಗ ಕಟ್ಟಡದೊಳಗೆ ಜನರಿದ್ದರೇ, ಗಾಯಗಳಾದವೆ, ಸಾವು ನೋವು ಸಂಭವಿಸಿತೇ ಎಂಬುದು ತಿಳಿದಿಲ್ಲ.