ಕೊರೊನಾ ಮಾಡಿರುವ ಅವಾಂತರ ಒಂದೆರಡಲ್ಲ. ಕೊರೊನಾದಿಂದ ಗುಣಮುಖರಾದವರಿಗೆ ಮತ್ತೊಂದಿಷ್ಟು ಸಮಸ್ಯೆ ಕಾಡ್ತಿದೆ. ಬ್ಲಾಕ್ ಫಂಗಸ್, ವೈಟ್ ಫಂಗಸ್, ಯಲ್ಲೋ ಫಂಗಸ್ ನಂತ್ರ ಮತ್ತೊಂದು ಸಮಸ್ಯೆ ಎದುರಾಗಿದೆ. ಕೊರೊನಾದಿಂದ ಗುಣಮುಖರಾದವರಿಗೆ ಸೈಟೊಮೆಗಾಲೊವೈರಸ್ ಸಮಸ್ಯೆ ಕಾಡಲು ಶುರುವಾಗಿದೆ.
ಇದರಿಂದ ಗುದನಾಳದ ರಕ್ತಸ್ರಾವಕ್ಕೆ ಸಂಬಂಧಿಸಿದ ಸಮಸ್ಯೆ ಕಾಡುತ್ತದೆ. ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ಐದು ಮಂದಿ ಈ ಸಮಸ್ಯೆಯಿರುವವರು ದಾಖಲಾಗಿದ್ದಾರೆ. ಅದ್ರಲ್ಲಿ ಒಬ್ಬ ಸಾವನ್ನಪ್ಪಿದ್ದಾನೆಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಕಳೆದ 45 ದಿನಗಳಲ್ಲಿ ಐದು ಪ್ರಕರಣ ದಾಖಲಾಗಿದೆ. ಕೊರೊನಾದಿಂದ ಗುಣಮುಖರಾದ 20-30 ದಿನದಲ್ಲಿ ರಕ್ತಸ್ರಾವ ಹಾಗೂ ಹೊಟ್ಟೆ ನೋವು ಸಮಸ್ಯೆ ಹೊತ್ತು ಆಸ್ಪತ್ರೆಗೆ ಬಂದಿದ್ದರು.
ಕೊರೊನಾ ರೋಗಿಗಳಿಗೆ ಬಳಸುವ ಔಷಧಿ ಅವರ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಅದ್ರಲ್ಲೂ ವಿಶೇಷವಾಗಿ ಸ್ಡಿರಾಯ್ಡ್ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಇದು ಹೊಸ ರೋಗಗಳನ್ನು ಆಹ್ವಾನಿಸುತ್ತದೆ. ಸೈಟೊಮೆಗಾಲೊವೈರಸ್ ಕೂಡ ಕಡಿಮೆ ರೋಗ ನಿರೋಧಕ ಶಕ್ತಿಯಿರುವವರ ಮೇಲೆ ದಾಳಿ ನಡೆಸುತ್ತದೆ.