ಮಹಾರಾಷ್ಟ್ರದ ಪುಣೆ ಜಿಲ್ಲೆಯ ಉರ್ಲಿ ಕಾಂಚನ್ ಗ್ರಾಮದ ರೈತರೊಬ್ಬರು ನಗರ ನಿವಾಸಿಗಳನ್ನು ಉತ್ತೇಜಿಸಲು ತಮ್ಮ ಮನೆಯ ತಾರಸಿಯನ್ನೆ ದ್ರಾಕ್ಷಿ ತೋಟವನ್ನಾಗಿ ಪರಿವರ್ತಿಸಿದ್ದಾರೆ. 2013 ರಲ್ಲಿ ಯುರೋಪ್‌ಗೆ ಭೇಟಿ ನೀಡಿದ ವೇಲೆ ಆ ದೇಶದ ಜನರು ತಮ್ಮ ಟೆರೇಸ್‌ಗಳಲ್ಲಿ ದ್ರಾಕ್ಷಿ ಮತ್ತು ಇತರ ಹಣ್ಣುಗಳನ್ನು ಬೆಳೆಯುವುದನ್ನು ನೋಡಿದ ನಂತರ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದು ರೈತ ಬಾಹುಸಾಹೇಬ್ ಹೇಳಿದ್ದಾರೆ.
ಬಾಹುಸಾಹೇಬ್ ಅವರು 2015 ರಲ್ಲಿ ಪುಣೆಯ ಐಸಿಎಆರ್ ರಾಷ್ಟ್ರೀಯ ಸಂಶೋಧನಾ ಕೇಂದ್ರದಿಂದ ಮಂಜೇರಿ ಮೆಡಿಕಾ ಪ್ರಭೇದದ ಐದು ದ್ರಾಕ್ಷಿ ಬಳ್ಳಿಗಳನ್ನು ಖರೀದಿಸಿದರು. ಪ್ರಾಥಮಿಕವಾಗಿ ಈ ಹಣ್ಣಿನ ಬೀಜದಿಂದ ಔಷಧವನ್ನು ತಯಾರಿಸಲು ಬಳಸಲಾಗುತ್ತದೆ. ತಾರಸಿಯಲ್ಲಿಯೆ ಜೀವಕಂಡುಕೊಂಡಿರುವ ಈ ಬಳ್ಳಿಗಳು, 30 ಅಡಿ ಎತ್ತರವನ್ನು ತಲುಪಿವೆ, ಛಾವಣಿಯ ಮೇಲೆ 1100 ಚದರ ಅಡಿ ವಿಸ್ತೀರ್ಣದಷ್ಟು ಹರಡಿವೆ. ವಿಜ್ಞಾನಿಗಳು ಸಹ ಇಲ್ಲಿಗೆ ಬಂದು ಹಣ್ಣಿನ ಗುಣಮಟ್ಟದ ಬಗ್ಗೆ ಸಂಶೋಧನೆ ನಡೆಸುವುದಾಗಿ ಹೇಳಿದ್ದಾರೆ ಎಂದು ಬಾಹುಸಾಹೇಬ್ ಹೇಳಿದ್ದಾರೆ.
ರೈಲು ನಿಲ್ದಾಣದಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಶಾಕಿಂಗ್ ದೃಶ್ಯ
ರೈತರು ಮತ್ತು ಜನರು ಆಗಾಗ್ಗೆ ಭೇಟಿ ನೀಡಿ, ಟೆರೇಸ್‌ನಲ್ಲಿ ಇಷ್ಟು ಪ್ರಮಾಣದಲ್ಲಿ ದ್ರಾಕ್ಷಿಯನ್ನು ಹೇಗೆ ಉತ್ಪಾದಿಸಬಹುದು ಎಂದು ಆಶ್ಚರ್ಯ ಪಡುತ್ತಾರೆ. ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಕೃಷಿಯಲ್ಲಿ ಏನನ್ನಾದರೂ ಮಾಡುವ ಸಾಧ್ಯತೆಗಳಿವೆ ಎಂದು ನಾನು ಸಂದೇಶ ಕಳುಹಿಸಲು ಬಯಸುತ್ತೇನೆ. ಅವರು ತಮ್ಮ ತಾರಸಿಯನ್ನು ಬಳಸಿಕೊಂಡು, ದ್ರಾಕ್ಷಿಯನ್ನು ಉತ್ಪಾದಿಸಲು ಪ್ರಾರಂಭಿಸಬಹುದು. ನನ್ನ ಮನೆಯ ತಾರಸಿಯಲ್ಲಿ ನಾನು ದ್ರಾಕ್ಷಿಯನ್ನು ಬೆಳೆಯಲು ಸಾಧ್ಯವಾದರೆ, ಇತರರು ಇದೇ ರೀತಿ ಮಾಡಬಹುದು. ಖಾಲಿ ಸ್ಥಳಗಳ ಹೆಚ್ಚಿನ ಬಳಕೆಯನ್ನು ಮಾಡಬಹುದು ಎಂದು ಬಾಹುಸಾಹೇಬ್ ಸಂದೇಶ ನೀಡಿದ್ದಾರೆ.