ನಟ ‘ಅಲ್ಲು ಅರ್ಜುನ್’ ಬಿಡುಗಡೆಗೆ ಒತ್ತಾಯಿಸಿ ಅವರ ಅಭಿಮಾನಿಯೊಬ್ಬರು ಶುಕ್ರವಾರ ರಾತ್ರಿ ಚಂಚಲಗುಡ ಜೈಲಿನ ಹೊರಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಡಿಸೆಂಬರ್ 4 ರಂದು ನಡೆದ ಪುಷ್ಪಾ 2: ದಿ ರೂಲ್ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಚಿತ್ರಮಂದಿರದಲ್ಲಿ 35 ವರ್ಷದ ಮಹಿಳೆಯ ಸಾವಿಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಕೆಲವೇ ಗಂಟೆಗಳ ನಂತರ ತೆಲಂಗಾಣ ಹೈಕೋರ್ಟ್ ನಟನಿಗೆ ಜಾಮೀನು ನೀಡಿದೆ. ಜಾಮೀನು ಪಡೆದರೂ, ಕಾಗದಪತ್ರಗಳ ವಿಳಂಬದಿಂದಾಗಿ ಅವರು ರಾತ್ರಿಯನ್ನು ಜೈಲಿನಲ್ಲಿ ಕಳೆಯಬೇಕಾಯಿತು.
ಆದರೆ, ಅಲ್ಲು ಅರ್ಜುನ್ ಜೈಲಿನಲ್ಲಿದ್ದಾಗ, ಅಭಿಮಾನಿಯೊಬ್ಬರು ನಟನನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.ಅಭಿಮಾನಿ ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದನು. ವರದಿಯ ಪ್ರಕಾರ, ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ತಡೆಗಟ್ಟಿ ಆತನನ್ನು ವಶಕ್ಕೆ ತೆಗೆದುಕೊಂಡರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
అల్లు అర్జున్ను విడుదల చేయాలంటూ చంచల్గూడ జైలు వద్ద సూసైడ్ అటెంప్ట్ చేసిన అల్లు అర్జున్ అభిమాని pic.twitter.com/PSaKKiAM8y
— Telugu Scribe (@TeluguScribe) December 14, 2024