ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಶೋ ‘ದಿ ಟ್ರಯಲ್’ ನಲ್ಲಿ ಕಾಜೋಲ್ ಅವರೊಂದಿಗೆ ನಟಿಸಿದ್ದ ಬಾಲಿವುಡ್ ನಟಿ ನೂರ್ ಮಾಲಾಬಿಕಾ ದಾಸ್ ಜೂನ್ 6 ರಂದು ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಇದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ.ಪೊಲೀಸರ ಪ್ರಕಾರ, ನಟಿಯ ನೆರೆಹೊರೆಯವರು ಆಕೆಯ ಅಪಾರ್ಟ್ ಮೆಂಟ್ ನಿಂದ ಬಂದಂತಹ ಕೆಟ್ಟ ವಾಸನೆಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ನೂರ್ ಮಾಲಾಬಿಕಾ ದಾಸ್ ಅವರ ಕೊಳೆತ ದೇಹವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ನೂರ್ ಮಾಲಾಬಿಕಾ ದಾಸ್ ‘ಚರಮ್ಸುಖ್’, ‘ದೇಖಿ ಅಂಡೇಖಿ’, ‘ಸಿಸ್ಕಿಯಾನ್’, ‘ವಾಲ್ಕಮನ್’ ಮತ್ತು ‘ಜಗನ್ಯಾ ಉಪಾಯ’ ಸೇರಿದಂತೆ ಕೆಲವು ಚಲನಚಿತ್ರಗಳು ಮತ್ತು ವೆಬ್ ಶೋಗಳ ಭಾಗವಾಗಿದ್ದಾರೆ. ಕಾಜೋಲ್ ನೇತೃತ್ವದ ‘ದಿ ಟ್ರಯಲ್’ ಚಿತ್ರದಲ್ಲಿ ಅವರು ಪೋಷಕ ಪಾತ್ರವನ್ನು ನಿರ್ವಹಿಸಿದ್ದರು.