ನವದೆಹಲಿ: ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವಾಗ ಜೋಡಿಯೊಂದು ಥಮ್ಸ್ ಅಪ್ ಅನ್ನು ಬೂಟಿನಲ್ಲಿ ಸುರಿದುಕೊಂಡು ಕುಡಿದಿರುವ ವಿಡಿಯೋ ವೈರಲ್ ಆಗಿದೆ.
ದೆಹಲಿ ಮೆಟ್ರೋ, ವೇದ್ ವ್ಯಾನ್ ಪಾರ್ಕ್ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಈ ಜೋಡಿ ಶೂಗೆ ಥಮ್ಸ್ ಅಪ್ ಸುರಿದು ಕುಡಿದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ-ಯುವತಿಯರಿಬ್ಬರು ಥಮ್ಸ್ ಅಪ್ ಅನ್ನು ಯುವಕನ ಶೂಗೆ ಸುರಿದು ನಂತರ ಸ್ಟ್ರಾ ಬಳಸಿ ಕುಡಿದಿದ್ದಾರೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ರಿಲ್ಯಾಕ್ಸೊದ 150 ರೂ.ಗಳ ಚಪ್ಪಲಿಯನ್ನು ಈ ಜನರಿಗಾಗಿ ಮಾತ್ರ ತಯಾರಿಸಲಾಗಿದೆ ಎಂದು ವೀಡಿಯೊಗೆ ಶೀರ್ಷಿಕೆ ನೀಡಲಾಗಿದೆ.
ಈ ವಿಡಿಯೋ ನೆಟ್ಟಿಗರನ್ನು ಅಸಹ್ಯಗೊಳಿಸಿದೆ. ಒಬ್ಬ ಬಳಕೆದಾರರು ವಿಡಿಯೋ ರೀಲ್ಸ್ ಗಾಗಿ ಜನರು ಏನು ಬೇಕಾದ್ರೂ ಮಾಡುತ್ತಾರೆ ಅನ್ನೋದಕ್ಕೆ ಇದು ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.