ಈ ಕಾಲದಲ್ಲಿ ಯಾರನ್ನು ನಂಬೋಕಾಗಲ್ಲ ಅನ್ನೋ ಮಾತು ಮತ್ತೆ ಸಾಬೀತಾಗಿದೆ. ಇಬ್ಬರು ಖತರ್ನಾಕ್ ಕಳ್ಳರು ತಮ್ಮ ರೂಮ್‌ಮೇಟ್ ಖಾತೆಯಿಂದ ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವನಂದನ್ ಕುಮಾರ್ ಮತ್ತು ಮೊಹಮ್ಮದ್ ಜಬೀರ್ ಎನ್ನುವವರನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ ನೋಡುವುದಾದರೆ, ದೆಹಲಿಯ ದಕ್ಷಿಣ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬರು ನನಗೆ ಗೊತ್ತಿಲ್ಲದೆ ನನ್ನ ಬ್ಯಾಂಕ್ ಖಾತೆಯಿಂದ 3,45,001 ರೂಪಾಯಿಗಳನ್ನು ಡೆಬಿಟ್ ಮಾಡಲಾಗಿದೆ ಎಂದು ಹೇಳಿದಾಗ ವಿಷಯ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ, ಈ ತನಿಖೆಯಲ್ಲಿ ದೂರುದಾರರ ರೂಮ್ ಮೇಟ್ ಗಳೇ ಕಳ್ಳರು ಎಂದು ಬಯಲಾಗಿದೆ. ಮೊಬೈಲ್ ಪಾವತಿ ಗೇಟ್‌ವೇ ಮೂಲಕ 3,45,001 ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಸೋಂಕಿಗೊಳಗಾದ ಬಳಿಕ ಎರಡು ಡೋಸ್ ಲಸಿಕೆ ಪಡೆದವರಿಗೆ ಭರ್ಜರಿ ಗುಡ್ ನ್ಯೂಸ್
2021ರ ನವೆಂಬರ್ 11 ರಂದು ದೂರುದಾರರ ಸಿಮ್ ಔಟ್ ಆಫ್ ಸರ್ವಿಸ್ ಆಗಿದೆ ಎಂದು ಸಿಮ್ ಕಂಪನಿಯವರಿಗೆ ಮತ್ತೊಂದು ಸಿಮ್‌ಕಾರ್ಡ್ ಇಶ್ಯು ಮಾಡಲು ಅಪ್ಲೈ ಮಾಡಿದ್ದಾರೆ. ಆ ನಂತರ ಬ್ಯಾಂಕ್ ಖಾತೆಯ ಫೋನ್ ನಂಬರ್ ಬದಲಿಸಲು ಬ್ಯಾಂಕ್ ಗೆ ಹೋದಾಗ ಅವರಿಗೆ ತಿಳಿಯದೆ ಮೂರು ಲಕ್ಷಕ್ಕೂ ಹೆಚ್ಚು ಹಣ ವರ್ಗಾವಣೆಯಾಗಿರುವುದು ತಿಳಿದು ಬಂದಿದೆ. ಆನಂತರ ಸಂತ್ರಸ್ತರು ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ದೂರು ಪಡೆದ ಪೊಲೀಸರು ತನಿಖೆಯನ್ನು ಪ್ರಾರಂಭಿಸಿ ಪ್ರಾಥಮಿಕ ಹಂತದಲ್ಲಿ, ಬ್ಯಾಂಕ್ ಖಾತೆಯ ವಿವರಗಳನ್ನು ಸ್ಕ್ಯಾನ್ ಮಾಡಿದ್ದಾರೆ. ದೂರುದಾರರ ಬ್ಯಾಂಕ್ ಖಾತೆಯಿಂದ ಮೊತ್ತವನ್ನು ಡೆಬಿಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಂತರ ಹಣ ವರ್ಗಾವಣೆಯಾದ ಫಲಾನುಭವಿ ಖಾತೆಯ ವಿವರ ಪಡೆದಿದ್ದಾರೆ. ನವೆಂಬರ್ 7 ಮತ್ತು 10 ರ ನಡುವೆ ಮತ್ತೊಂದು ಫೋನ್‌ನಿಂದ ಮೊಬೈಲ್ ಪಾವತಿ ಗೇಟ್‌ವೇ ಮೂಲಕ ವಹಿವಾಟು ನಡೆಸಲಾಗಿದೆ ಎಂದು ಪೊಲೀಸರಿಗೆ ತಿಳಿದುಬಂದಿದೆ.
ಸರ್ವೈಯಲೆನ್ಸ್ ಮತ್ತು ತಾಂತ್ರಿಕ ವಿಶ್ಲೇಷಣೆಯ ಮೂಲಕ, ಆರೋಪಿಗಳು ನೆಲೆಸಿದ್ದ ಸ್ಥಳದ ಮಾಹಿತಿ ಪಡೆದ ಪೊಲೀಸರು, ಜನವರಿ 16, 2021 ರಂದು ದಾಳಿ ನಡೆಸಿ ಇಬ್ಬರನ್ನ ಬಂಧಿಸಿದ್ದಾರೆ. ಅಲ್ಲದೇ ಕೃತ್ಯ ಎಸಗಲು ಬಳಸಿದ ಫೋನ್ ಹಾಗೂ 2,65,000 ಹಣವನ್ನ ವಶಪಡಿಸಿಕೊಂಡಿದ್ದಾರೆ.