ಹಿಂದೂ ಸಂಪ್ರದಾಯದಲ್ಲಿ ಹರಿಕತೆಗಳಿಗೆ ತುಂಬಾನೇ ಮಹತ್ವವಿದೆ. ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಪದ್ಧತಿ ಕಾಲ ಕ್ರಮೇಣ ಪ್ರಸಿದ್ಧಿಯನ್ನ ಕೊಂಚ ಕಳೆದುಕೊಂಡರೂ ಸಹ ಪರಂಪರೆಯಲ್ಲಿ ಇಂದಿಗೂ ಪ್ರಾಮುಖ್ಯತೆ ಪಡೆದಿರೋದಂತೂ ಸುಳ್ಳಲ್ಲ.
ಇದೀಗ ಕೆಲ ಕ್ರಿಶ್ಚಿಯನ್ ಮಹಿಳೆಯರು ಹರಿಕತೆ ಮಾದರಿಯಲ್ಲಿಯೇ ಏಸು ಕತೆಯನ್ನ ಮಾಡ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಾಮಂಜೂರು ಎಂಬಲ್ಲಿನ ಕ್ರಿಶ್ಚಿಯನ್ ಶಾಲೆಯ ಧರ್ಮಭಗಿನಿಯರು ಸೇರಿ ಇಂತಹದ್ದೊಂದು ವಿಶೇಷ ಪ್ರಯತ್ನಕ್ಕೆ ಕೈ ಹಾಕಿದೆ. ʼಬೋಲೋ ಏಸು ಮಹಾರಾಜ್ ಕಿ ಜೈʼ ಎನ್ನುತ್ತಾ ಮಹಿಳೆಯರು ಸಂಗೀತ ವಾದ್ಯಗಳನ್ನ ಹಿಡಿದು ಏಸುವಿನ ಗುಣಗಾನ ಮಾಡ್ತಿದ್ದಾರೆ.
ಕೊರೊನಾ ಲಸಿಕೆ ಹಾಕಿಸಿಕೊಂಡ ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ
ಈ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ಸಂಪ್ರದಾಯಸ್ಥರು ಮಹಿಳೆಯರ ಈ ಪ್ರಯತ್ನವನ್ನ ವಿರೋಧಿಸಿದ್ದು ಇದು ಹರಿಕತೆಗೆ ಮಾಡಿರುವ ಅವಮಾನ ಎಂದು ಆರೋಪಿಸಿದ್ದಾರೆ. ಹಲವರು ಏಸು ಕತೆಯನ್ನ ಹೀಗೂ ಕೇಳುತ್ತೇವೆ ಎಂದುಕೊಂಡಿರಲಿಲ್ಲ ಎಂದು ಸಂತಸ ಹೊರಹಾಕಿದ್ದಾರೆ.
ಧರ್ಮ ಭಗಿನಿಯರ ಕೇಂದ್ರ ಸ್ಥಾನ ಮಂಗಳೂರು ಆಗಿದ್ದರೂ ಸಹ ಅವರು ಹೆಚ್ಚಾಗಿ ಸೇವೆ ನೀಡುವುದು ಉತ್ತರ ಕರ್ನಾಟಕ ಭಾಗದಲ್ಲಿ . ಹೀಗಾಗಿ ಕನ್ನಡ ಭಜನೆಗಳನ್ನೇ ಇವರು ಏಸುವಿನ ಆರಾಧನೆಗೆ ಹೆಚ್ಚಾಗಿ ಬಳಕೆ ಮಾಡುತ್ತಾರೆ.
https://www.youtube.com/watch?v=5Rm98lY1t84