alex Certify ‘RCB’ ಅಭಿಮಾನಿಗಳ ದಶಕಗಳ ಕನಸು ಈಡೇರಿದೆ, ಈ ಸಲ ಕಪ್ ನಮ್ದೆ -CM ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘RCB’ ಅಭಿಮಾನಿಗಳ ದಶಕಗಳ ಕನಸು ಈಡೇರಿದೆ, ಈ ಸಲ ಕಪ್ ನಮ್ದೆ -CM ಸಿದ್ದರಾಮಯ್ಯ

ಬೆಂಗಳೂರು : ಆರ್.ಸಿ.ಬಿ ಅಭಿಮಾನಿಗಳ ದಶಕಗಳ ಕನಸು ಈಡೇರಿದೆ, ಈ ಸಲ ಕಪ್ ನಮ್ದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಇಂದಿನ #TATAWPL ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮಣಿಸಿ ಆರ್.ಸಿ.ಬಿ ತಂಡ ಚಾಂಪಿಯನ್ಶಿಪ್ ಅನ್ನು ಮುಡಿಗೇರಿಸಿಕೊಂಡಿದೆ. ಇಡೀ ಪಂದ್ಯಾಕೂಟದುದ್ದಕ್ಕೂ ಸಂಘಟಿತ ಪ್ರದರ್ಶನ ನೀಡಿರುವ ನಮ್ಮ ಹುಡುಗಿಯರ ಆಟ ಅಭಿನಂದನಾರ್ಹ. ಕ್ರಿಕೆಟ್ ಪ್ರೇಮಿಯಾದ ನನಗೆ ಈ ಗೆಲುವು ಅತ್ಯಂತ ಖುಷಿಕೊಟ್ಟಿದೆ. ಆರ್.ಸಿ.ಬಿ ಅಭಿಮಾನಿಗಳ ದಶಕಗಳ ಕನಸು ಇಂದು ಈಡೇರಿದೆ. ಐಪಿಎಲ್ ನಲ್ಲಿಯೂ ನಮ್ಮ ಹುಡುಗರು ಕಪ್ ಗೆಲ್ಲಲಿ ಎಂಬ ಹಾರೈಕೆ ನನ್ನದು. ಈ ಸಲ ಕಪ್ ನಮ್ದೆ…… ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...