ಅಮೆರಿಕದಲ್ಲಿ ಹೊಸ ಮತ್ತು ಅಪಾಯಕಾರಿ ಶಿಲೀಂಧ್ರವು ವೇಗವಾಗಿ ಹರಡುತ್ತಿದೆ. ಕ್ಯಾಂಡಿಡಾ ಔರಿಸ್ ಅಥವಾ ಸಿ. ಔರಿಸ್ ಎಂದು ಕರೆಯಲ್ಪಡುವ ಈ ಔಷಧ-ನಿರೋಧಕ ಶಿಲೀಂಧ್ರವು ವೇಗವಾಗಿ ಹರಡುತ್ತಿದ್ದು, ತೀವ್ರ ಅನಾರೋಗ್ಯವನ್ನು ಉಂಟುಮಾಡುವ ಸಾಧ್ಯತೆಗಳಿವೆ.
ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್‌ನ ಇತ್ತೀಚಿನ ಅಧ್ಯಯನದ ಪ್ರಕಾರ, ಅಮೆರಿಕದಲ್ಲಿ ಮೊದಲ ಬಾರಿಗೆ ವರದಿಯಾದಾಗಿನಿಂದ ಸಿ. ಆರಿಸ್‌ನ ಸೋಂಕುಗಳು ಬಹಳ ವೇಗದಲ್ಲಿ ಹರಡುತ್ತಿದೆ. ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪ್ರತಿ ವರ್ಷ ಇದರ ಸೋಂಕು ಹೆಚ್ಚುತ್ತಲೇ ಸಾಗಿದ್ದು, 2021 ರಲ್ಲಿ ಮತ್ತಷ್ಟು ಹೆಚ್ಚಳವಾಗಿದೆ.
ಆರೋಗ್ಯ ಇಲಾಖೆಯು ಇದಾಗಲೇ ಇವುಗಳ ಕುರಿತು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳಿಗೆ ಎಚ್ಚರಿಕೆಯನ್ನು ನೀಡಿದ್ದದು, ಇವುಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.