‘ವಂದೇ ಭಾರತ್’ ರೈಲಿನ ಊಟದಲ್ಲಿ ಸತ್ತ ಜಿರಳೆ ಪತ್ತೆ ಯಾಗಿದ್ದು, ಪ್ರಯಾಣಿಕರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ವಂದೇ ಭಾರತ್ ಎಕ್ಸ್ಪ್ರೆಸ್ ನೀಡುವ ಆಹಾರದಲ್ಲಿ ಸತ್ತ ಜಿರಳೆಯನ್ನು ಕಂಡು ಡಾ.ಶುಭೇಂದು ಕೇಸರಿ ವಾಸ್ ಎಂಬ ಪ್ರಯಾಣಿಕ ಶಾಕ್ ಆಗಿದ್ದಾರೆ.
ಕೇಸರಿ ವಾಸ್ ಕಮಲಪತಿಯಿಂದ ಜಬಲ್ಪುರ್ ಜಂಕ್ಷನ್ ಗೆ ಪ್ರಯಾಣಿಸುತ್ತಿದ್ದರು. ಸೆಮಿ ಹೈಸ್ಪೀಡ್ ರೈಲಿನಲ್ಲಿ ಪಡೆದ ಆಹಾರದಲ್ಲಿ ಸತ್ತ ಜಿರಳೆ ಪತ್ತೆಯಾಗಿದ್ದು, ಫೋಟೋಗಳನ್ನು ಹಂಚಿಕೊಂಡು ರೈಲ್ವೇ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ವೈರಲ್ ಪೋಸ್ಟ್ ಗೆ ಪ್ರತಿಕ್ರಿಯೆಯಾಗಿ, ಐ’ಆರ್ ಸಿಟಿಸಿ ಕ್ಷಮೆಯಾಚಿಸಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ, ಮತ್ತು ಆಹಾರ ಪೂರೈಕೆದಾರರಿಗೆ ಭಾರಿ ದಂಡ ವಿಧಿಸಲಾಗಿದೆ , ಕ್ಷಮೆ ಇರಲಿ ಎಂದು ಪ್ರತಿಕ್ರಿಯೆ ನೀಡಿದೆ.