ಕಾಡಿನ ರಾಣಿ ಬೇರೆ ಯಾವುದೇ ಪ್ರಾಣಿಗೆ ಹೆದರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇದೀಗ, ತಾಂಜಾನಿಯಾದ ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಿಸಲಾದ ವಿಡಿಯೋದಲ್ಲಿ, ಜೀಬ್ರಾಗಳ ಓಟ ಸಿಂಹಿಣಿಗಳನ್ನು ಮೀರಿಸಿದೆ.
ಸೆಪ್ಟೆಂಬರ್ 4 ರಂದು ಮಸಾಯಿ ಸೈಟಿಂಗ್ಸ್ನಿಂದ ಯೂಟ್ಯೂಬ್ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನದಲ್ಲಿ ಜೀಬ್ರಾಗಳ ಓಟದಿಂದ ವಿಡಿಯೋ ಪ್ರಾರಂಭವಾಗುತ್ತದೆ. ಒಂದು ನಿಮಿಷದ ಅವಧಿಯ ವಿಡಿಯೋದಲ್ಲಿ, ಸಿಂಹಿಣಿಯು ಬೆರಗುಗಣ್ಣಿನಿಂದ ಜೀಬ್ರಾವನ್ನು ಹಿಡಿಯಲು ಪೊದೆಯ ಹಿಂದೆ ಅಡಗಿಕೊಂಡಿದೆ. ಮುಂದಿನ ದೃಶ್ಯ ನಿಮ್ಮನ್ನು ಮತ್ತಷ್ಟು ಚಕಿತಗೊಳಿಸುತ್ತದೆ.
ಹೌದು, ಜೀಬ್ರಾಗಳನ್ನು ಬುದ್ಧಿವಂತ ಪ್ರಾಣಿಗಳು ಎಂದು ಕರೆಯಲಾಗುತ್ತದೆ. ಸಿಂಹಿಣಿ ಇರುವುದನ್ನು ಗಮನಿಸಿದ ಜೀಬ್ರಾಗಳು ಅತಿವೇಗದಲ್ಲಿ ಓಡಲು ಆರಂಭಿಸಿದವು. ಇದು ಎರಡು ಸಿಂಹಿಣಿಗಳನ್ನು ಗೊಂದಲಕ್ಕೀಡು ಮಾಡಿದೆ. ಎರಡು ಸಿಂಹಿಣಿಗಳು ಅವುಗಳನ್ನು ಸುತ್ತುವರಿಯಲು ಮತ್ತು ಕನಿಷ್ಠ ಒಂದು ಜೀಬ್ರಾವನ್ನು ಹಿಡಿಯಲು ತಂತ್ರಗಳನ್ನು ರೂಪಿಸುತ್ತವೆ. ಆದರೂ ಜೀಬ್ರಾಗಳು ವೇಗವಾಗಿ ಸಿಂಹಿಣಿಗಳನ್ನು ತುಳಿಯುತ್ತಾ ಓಟಕ್ಕಿತ್ತಿವೆ. ಕೊನೆಗೆ ಸಿಂಹಿಣಿಗಳು ಎರಡು ಜೀಬ್ರಾಗಳನ್ನು ಹಿಡಿಯುವಲ್ಲಿ ಕೊನೆಗೊಂಡಿವೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರನ್ನು ಬೆರಗುಗೊಳಿಸಿದೆ.