ಬೆಂಗಳೂರು : ಪುರಸಭಾ ಕಚೇರಿಯಲ್ಲೇ ವಿಷ ಸೇವಿಸಿ ಡಿ ಗ್ರೂಪ್ ನೌಕರ ಆತ್ಮಹತ್ಯೆಗೆ ಯತ್ನಿಸಿದ ಬೆಂಗಳೂರು ನಗರ ಜಿಲ್ಲೆಯ ಅನೇಕಲ್ ನಲ್ಲಿ ನಡೆದಿದೆ.
ಚಂದಾಪುರ ಪುರಸಭೆಯ ಡಿ ಗ್ರೂಪ್ ನೌಕರ ವೇಣು ಎಂಬುವವರು ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಸಹದ್ಯೋಗಿಗಳು ವೇಣು ಅವರನ್ನು ತಡೆದು ಆಸ್ಪತ್ರೆಗೆ ಸೇರಿಸಿದ್ದಾರೆ.ಅಸ್ವಸ್ಥಗೊಂಡ ವೇಣು ಅವರಿಗೆ ಚಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಿರಿಯ ಅಧಿಕಾರಿಗಳ ಕಿರುಕುಳವೇ ಆತ್ಮಹತ್ಯೆಗೆ ಯತ್ನಿಸಲು ಕಾರಣ ಎಂದು ಹೇಳಲಾಗಿದೆ.