alex Certify ಶಾಪವೋ ಅಥವಾ ನಿಸರ್ಗದ ಶಕ್ತಿಯೋ…? ಈ ದೇಶದಲ್ಲಿ ಮಮ್ಮಿಗಳಾಗಿ ಬದಲಾಗ್ತಿದೆ ಜನರ ಮೃತದೇಹ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಪವೋ ಅಥವಾ ನಿಸರ್ಗದ ಶಕ್ತಿಯೋ…? ಈ ದೇಶದಲ್ಲಿ ಮಮ್ಮಿಗಳಾಗಿ ಬದಲಾಗ್ತಿದೆ ಜನರ ಮೃತದೇಹ….!

ಕೊಲಂಬಿಯಾ ನಗರದಲ್ಲಿ ವಿಸ್ಮಯಕಾರಿ ಘಟನೆಗಳು ನಡೆಯುತ್ತಿವೆ. ಇಲ್ಲಿನ ಸ್ಯಾನ್ ಬರ್ನಾರ್ಡಿನೊ ಪುರಸಭೆಯ ಸ್ಮಶಾನದಲ್ಲಿ ಸಮಾಧಿ ಮಾಡಿದ ದೇಹಗಳು ಸ್ವತಃ ಮಮ್ಮಿಗಳಾಗುತ್ತವೆ. ಈ ಸ್ಮಶಾನವನ್ನು ನಿರ್ಮಿಸಿದಾಗ ಮಮ್ಮಿಫಿಕೇಶನ್ ಪ್ರಕ್ರಿಯೆಯು ಪ್ರಾರಂಭವಾಯಿತು. ಸ್ಯಾನ್ ಬರ್ನಾರ್ಡೊ ಮುನ್ಸಿಪಲ್ ಸ್ಮಶಾನದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿ. ಮೃತರ ಬಟ್ಟೆ, ಕೂದಲು ಮತ್ತು ಕಣ್ಣುಗಳು ಸಹ ಹಾಗೇ ಇರುತ್ತವೆ ಎಂದು ಹೇಳಲಾಗುತ್ತದೆ. ಈ ನಿಗೂಢವನ್ನು ಬಿಚ್ಚಿಡಲು ಹಲವು ಪ್ರಯತ್ನಗಳು ನಡೆದಿದ್ದರೂ ಸಫಲವಾಗಿಲ್ಲ.

1950ರಲ್ಲಿ ಮೊದಲ ಮಮ್ಮಿ ಪತ್ತೆ

ಸ್ಯಾನ್ ಬರ್ನಾರ್ಡೊ ಮುನ್ಸಿಪಲ್ ಸ್ಮಶಾನವನ್ನು 1949ರಲ್ಲಿ ತೆರೆಯಲಾಯಿತು. ಮೊದಲ ಮಮ್ಮಿ ಪತ್ತೆಯಾಗಿದ್ದು 1950ರಲ್ಲಿ. ಪ್ರತಿ ವರ್ಷ ಸುಮಾರು 50 ರಕ್ಷಿತ ಮಮ್ಮಿಗಳು ಇಲ್ಲಿರುತ್ತಿದ್ದವು. ಆದರೆ ಈಗ ಈ ಸಂಖ್ಯೆ ಕೇವಲ ಐದಕ್ಕೆ ಇಳಿದಿದೆ.

ಮೃತದೇಹಗಳು ನೈಸರ್ಗಿಕವಾಗಿ ಮಮ್ಮಿಯಾಗಲು ಹೇಗೆ ಸಾಧ್ಯ ಎಂಬುದು ಅನೇಕರನ್ನು ಕಾಡುತ್ತಿರುವ ಪ್ರಶ್ನೆ. ಇದು ನಗರದ ಆಹಾರ ಮತ್ತು ಜೀವನಶೈಲಿಗೆ ಸಂಬಂಧಿಸಿದೆ ಎಂದು ಹಲವರು ನಂಬುತ್ತಾರೆ. ಸ್ಮಶಾನದಲ್ಲಿ ಇನ್ನೂ ಹತ್ತಕ್ಕೂ ಹೆಚ್ಚು ಮಮ್ಮಿಗಳಿವೆ ಎಂದು ಹೇಳಲಾಗುತ್ತದೆ.

ವಿಜ್ಞಾನದ ಪ್ರಕಾರ ಈ ಮಮ್ಮಿಗಳ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ. ಕೆಲವರು ಇದನ್ನು ದೈವಿಕ ಶಕ್ತಿ ಎಂದು ಪರಿಗಣಿಸುತ್ತಾರೆ. ಅಷ್ಟೇ ಅಲ್ಲ ದೇವರ ಉಡುಗೊರೆ ಅಥವಾ ಶಿಕ್ಷೆ ಎಂದುಕೊಳ್ಳುತ್ತಾರೆ. ಕೆಲವು ತಜ್ಞರ ಪ್ರಕಾರ ಮಮ್ಮೀಕರಣವು ಒಣ ನೆಲದ ಮೇಲೆ ನಿರ್ಮಿಸಲಾದ ಕೋಣೆಗಳಲ್ಲಿ ಮೃತ ದೇಹಗಳ ಹೂಳುವಿಕೆಗೆ ಸಂಬಂಧಿಸಿದೆಯಂತೆ. ಆದರೆ ನಿಖರ ಕಾರಣಗಳು ಮಾತ್ರ ಇನ್ನೂ ದೊರೆತಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...