ಡೆಹ್ರಾಡೂನ್: ಬದರೀನಾಥ ದೇವಾಲಯದ ಮುಖ್ಯ ದ್ವಾರದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಉತ್ತರಖಂಡದ ಹಿಂದೂ ದೇವಾಲಯದ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಜೋಶಿಮಠ ಭೂ ಕುಸಿತದ ಘಟನೆಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲವಾದರೂ ದೇವಾಲಯವು ಕೇವಲ 40 ಕಿ.ಮೀ ದೂರದಲ್ಲಿರುವುದರಿಂದ ಇತ್ತೀಚಿನ ಬೆಳವಣಿಗೆಯು ಸ್ಥಳೀಯರು ಮತ್ತು ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.s
ಸ್ಥಳೀಯ ಭೌಗೋಳಿಕ ಅಂಶವೇ ಬಿರುಕುಗಳಿಗೆ ಕಾರಣ ಎಂದು ತಜ್ಞರು ಹೇಳಿದ್ದಾರೆ. ಜೋಶಿಮಠ ಮತ್ತು ಬದರೀನಾಥ್ ಎರಡೂ ವಿಭಿನ್ನ ಭೌಗೋಳಿಕ ರಚನೆಗಳಲ್ಲಿವೆ, ಆದ್ದರಿಂದ ಎರಡೂ ಸ್ಥಳಗಳಲ್ಲಿನ ಬಿರುಕುಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಶ್ರೀನಗರದ ಎಚ್ಎನ್ಬಿ ಗರ್ವಾಲ್ ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಮುಖ್ಯಸ್ಥ ಎಂಪಿಎಸ್ ಬಿಶ್ತ್ ಹೇಳಿದ್ದಾರೆ.ಮಳೆ ಮತ್ತು ಇತರ ಪರಿಸರ ಅಂಶಗಳಿಂದಾಗಿ ದೇವಾಲಯದ ಗೇಟ್ ನಲ್ಲಿ ಈ ಬಿರುಕುಗಳು ಉಂಟಾಗಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.