alex Certify ಏಕಾಏಕಿ ರಾಷ್ಟ್ರಪತಿ ಭವನ ನುಗ್ಗಲು ಯತ್ನಿಸಿದ ದಂಪತಿ ಅಂದರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಾಏಕಿ ರಾಷ್ಟ್ರಪತಿ ಭವನ ನುಗ್ಗಲು ಯತ್ನಿಸಿದ ದಂಪತಿ ಅಂದರ್​..!

ರಾಷ್ಟ್ರಪತಿ ಭವನಕ್ಕೆ ಏಕಾಏಕಿ ನುಗ್ಗಲು ಯತ್ನಿಸಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿದ್ದ ದಂಪತಿ ರಾಷ್ಟ್ರಪತಿ ಎಸ್ಟೇಟ್​​ಗೆ ನುಗ್ಗಲು ಯತ್ನಿಸಲು ಹೋಗಿ ಬ್ಯಾರಿಕೇಡ್​ಗಳಿಗೆ ಹಾನಿ ಉಂಟು ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಂಪತಿಯನ್ನು ತಡೆದ ಭದ್ರತಾ ಪಡೆ ಅಧಿಕಾರಿಗಳು ಕೂಡಲೇ ಅವರನ್ನು ದೆಹಲಿ ಪೊಲೀಸರ ವಶಕ್ಕೆ ನೀಡಿದ್ದಾರೆ. 20ರ ಆಸುಪಾಸಿನ ದಂಪತಿ ಹ್ಯುಂಡೈ ಐ 20 ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ. ದಂಪತಿಯ ವಿರುದ್ಧ ಸಾರ್ವಜನಿಕ ಆಸ್ತಿ ಹಾನಿ ಮಾಡಿದ ಆರೋಪ, ಮೋಟಾರ್ ವೆಹಿಕಲ್​ ಆ್ಯಕ್ಟ್​ ಸೇರಿದಂತೆ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ದಕ್ಷಿಣ ಅವೆನ್ಯೂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಎಸಿಪಿ, ಸೋಮವಾರ ರಾತ್ರಿ 11:35ರ ಸುಮಾರಿಗೆ ಈ ಘಟನೆಯ ಬಗ್ಗೆ ಮಾಹಿತಿ ದೊರಕಿದೆ. ದಂಪತಿ ತಮ್ಮ ಕಾರನ್ನು ರಾಷ್ಟ್ರಪತಿ ಭವನದ ಒಳಗೆ ನುಗ್ಗಿಸಲು ಯತ್ನಿಸಿದ್ದು, ಇದರಿಂದ ಬ್ಯಾರಿಕೇಡ್​ಗಳಿಗೆ ಹಾನಿ ಉಂಟಾಗಿದೆ. ಅವರು ರಾಷ್ಟ್ರಪತಿ ಭವನದ ಗೇಟ್​ನ ಒಳಕ್ಕೆ ನುಗ್ಗಿಲು ಯತ್ನಿಸಿದ್ದರು ಎಂದು ಹೇಳಿದ್ದಾರೆ. ಅವರನ್ನು ಆರ್​ಎಂಎಲ್​​ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...