ನಿಮ್ಮ ಪರ್ಸ್ ನ ಬಣ್ಣ ಹಾಗೂ ಆಕಾರ ನಮ್ಮ ಜೀವನದಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಧನ-ಸಂಪತ್ತಿನ ಲಾಭ-ಹಾನಿಯನ್ನು ಇದು ನಿರ್ಧರಿಸುತ್ತದೆ. ನಿಮ್ಮ ಅದೃಷ್ಟದ ಬಣ್ಣದ ಪರ್ಸ್ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬಹುದು. ದುರಾದೃಷ್ಟ ಬಣ್ಣದ ಪರ್ಸ್ ನಿಮ್ಮ ಕೈನಲ್ಲಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ.
ಜನ್ಮ ದಿನಾಂಕದ ಮೂಲಾಂಕಕ್ಕೆ ಅನುಸಾರವಾಗಿ ಅದೃಷ್ಟದ ಬಣ್ಣದ ಪರ್ಸ್ ಖರೀದಿ ಮಾಡಿದಲ್ಲಿ ಎಂದೂ ಹಣದ ಸಮಸ್ಯೆ ಎದುರಾಗುವುದಿಲ್ಲ. ಜೊತೆಗೆ ಪರ್ಸ್ ನಲ್ಲಿ ಸದಾ ಹಣ ತುಂಬಿರುತ್ತದೆ. ನಿಮ್ಮ ಅದೃಷ್ಟದ ನಂಬರ್ ಕಂಡು ಹಿಡಿಯಲು ನೀವು ನಿಮ್ಮ ಜನ್ಮದಿನಾಂಕದ ಎಲ್ಲ ಸಂಖ್ಯೆಯನ್ನು ಕೂಡಿಸಬೇಕು. ಅಂದ್ರೆ ನಿಮ್ಮ ಜನ್ಮ ದಿನಾಂಕ 12 ಆಗಿದ್ದಲ್ಲಿ 1+2=3. ನಿಮ್ಮ ಅದೃಷ್ಟದ ಸಂಖ್ಯೆ ಮೂರು ಎಂದರ್ಥ.
ಜನ್ಮ ದಿನಾಂಕ ಲೆಕ್ಕ ಹಾಕಿದಾಗ ಅದೃಷ್ಟದ ಸಂಖ್ಯೆ 1 ಬಂದಲ್ಲಿ ನಿಮ್ಮ ಅದೃಷ್ಟದ ಬಣ್ಣ ಕೆಂಪಾಗುತ್ತದೆ. ಕೆಂಪು ಬಣ್ಣದ ಪರ್ಸ್ ಜೊತೆ ಅದ್ರಲ್ಲಿ ಬೆಳ್ಳಿ ನಾಣ್ಯವನ್ನಿಡಿ.
ಅದೃಷ್ಟದ ಸಂಖ್ಯೆ 2 ಆಗಿದ್ದಲ್ಲಿ ನಿಮ್ಮ ಅದೃಷ್ಟದ ಬಣ್ಣ ಬಿಳಿ. ಹಾಗಾಗಿ ಬಿಳಿ ಬಣ್ಣದ ಪರ್ಸ್ ಸದಾ ನಿಮ್ಮ ಜೊತೆಗಿರಲಿ.
ಅದೃಷ್ಟದ ಸಂಖ್ಯೆ 3 ಆಗಿದ್ದಲ್ಲಿ ಅದೃಷ್ಟದ ಬಣ್ಣ ಹಳದಿಯಾಗಿರುತ್ತದೆ. ಹಳದಿ ಬಣ್ಣದ ಪರ್ಸ್ ನಿಮ್ಮ ಜೀವನ ಬದಲಿಸುವ ಶಕ್ತಿ ಹೊಂದಿದೆ.
ನಾಲ್ಕು ಅದೃಷ್ಟದ ಸಂಖ್ಯೆಯಾಗಿದ್ದರೆ ಅದೃಷ್ಟದ ಬಣ್ಣ ಕಂದು ಬಣ್ಣವಾಗಿರುತ್ತದೆ. ಈ ಬಣ್ಣದ ಪರ್ಸ್ ಜೊತೆ ಸ್ವಲ್ಪ ತವರಿನ ಮಣ್ಣನ್ನು ಪರ್ಸ್ ನಲ್ಲಿಟ್ಟುಕೊಳ್ಳಿ.
ಐದು ನಿಮ್ಮ ಅದೃಷ್ಟದ ಸಂಖ್ಯೆಯಾಗಿದ್ದರೆ ಹಸಿರು ಬಣ್ಣದ ಪರ್ಸ್ ಸದಾ ಜೊತೆಗಿಟ್ಟುಕೊಳ್ಳಿ.
ಅದೃಷ್ಟದ ಸಂಖ್ಯೆ 6 ಆಗಿದ್ದಲ್ಲಿ ಬಿಳಿ ಬಣ್ಣದ ಪರ್ಸ್ ನಿಮಗೆ ಅದೃಷ್ಟ ತಂದುಕೊಡುತ್ತದೆ. ಜೊತೆಗೆ ತಾಮ್ರದ ನಾಣ್ಯವನ್ನು ಪರ್ಸ್ ನಲ್ಲಿಟ್ಟುಕೊಳ್ಳಿ.
ಮೂಲಾಂಕ 7 ಆಗಿದ್ದಲ್ಲಿ ನೀವು ಮಲ್ಟಿ ಕಲರ್ ಪರ್ಸ್ ಬಳಸಬಹುದು. ಪರ್ಸ್ ನಲ್ಲಿ ಮೀನಿನ ಚಿತ್ರವನ್ನು ಇಟ್ಟುಕೊಳ್ಳಿ.
ಅದೃಷ್ಟದ ಸಂಖ್ಯೆ 8 ಆದಲ್ಲಿ ನೀಲಿ ಬಣ್ಣದ ಪರ್ಸ್ ಖರೀದಿ ಮಾಡಿ.
9 ನಿಮ್ಮ ಅದೃಷ್ಟದ ಸಂಖ್ಯೆಯಾದಲ್ಲಿ ಕಿತ್ತಳೆ ಬಣ್ಣದ ಪರ್ಸ್ ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ. ಇದ್ರ ಜೊತೆಗೆ ತಾಮ್ರದ ನಾಣ್ಯವನ್ನು ನೀವು ಪರ್ಸ್ ನಲ್ಲಿಟ್ಟುಕೊಳ್ಳಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003