ಕನಸು ಮುಂದಾಗುವ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತದೆ. ಕೆಲವೊಂದು ಕನಸು ಶುಭ ಫಲ ನೀಡಿದ್ರೆ ಮತ್ತೆ ಕೆಲ ಕನಸುಗಳು ಅಶುಭ ಸಂಕೇತವನ್ನು ನೀಡುತ್ತವೆ. ಕನಸಿನಲ್ಲಿ ನವಿಲು ಕಂಡ್ರೆ ಯಾವ ಸಂಕೇತ ಎಂಬುದರ ವಿವರ ಇಲ್ಲಿದೆ.
ಕನಸಿನಲ್ಲಿ ನವಿಲು ಕಂಡ್ರೆ ಅದನ್ನು ಶುಭವೆಂದು ಪರಿಗಣಿಸಲಾಗಿದೆ. ಕನಸಿನಲ್ಲಿ ಜೋಡಿ ನವಿಲು ಕಂಡ್ರೆ ದಾಂಪತ್ಯದಲ್ಲಿ ಸುಖ ಸಿಗಲಿದೆ ಎಂಬುದರ ಸೂಚನೆ. ಮುಂದಿನ ದಿನಗಳಲ್ಲಿ ನಿಮಗೆ ಸುಖ ಪ್ರಾಪ್ತಿಯಾಗಲಿದೆ ಎಂದರ್ಥ. ನವಿಲು ಹಿಂಭಾಗದಲ್ಲಿ ರೆಕ್ಕೆ ಬಡಿಯುತ್ತಿದ್ದಂತೆ ಕಂಡರೆ ಅದು ಅಶುಭವೆಂದು ಹೇಳಲಾಗುತ್ತದೆ.
ಯಾವ ವ್ಯಕ್ತಿ ಕನಸಿನಲ್ಲಿ ನವಿಲು ಕಾಣುತ್ತೆ ಎಂಬುದು ಶುಭ, ಅಶುಭವನ್ನು ಸೂಚಿಸುತ್ತದೆ. ರೈತರ ಕನಸಿನಲ್ಲಿ ನವಿಲು ಕಂಡ್ರೆ ಒಳ್ಳೆಯದು ಎನ್ನಲಾಗಿದೆ. ಮರದ ಮೇಲೆ ನವಿಲು ಕುಣಿಯುತ್ತಿರುವುದು ಕಂಡ್ರೆ ದೊಡ್ಡ ಅಪಾಯದ ಸಂಕೇತ. ಆದ್ರೆ ಈ ಕನಸು ರೋಗಿಗೆ ಕಂಡ್ರೆ ಆತ ಔಷಧಿಯಿಲ್ಲದೆ ಗುಣಮುಖನಾಗ್ತಾನೆ ಎಂಬ ಸೂಚನೆ. ಕೈದಿಗೆ ನವಿಲು ನರ್ತಿಸಿದಂತೆ ಕಂಡ್ರೆ ಶೀಘ್ರ ಸ್ವಾತಂತ್ರ್ಯ ಸಿಗುತ್ತೆ ಎಂದರ್ಥ.