ಮಡಿಕೇರಿ : ಕಾಡಾನೆ ದಾಳಿಗೆ ಪ್ಲ್ಯಾಂಟರ್ ಒಬ್ಬರು ಬಲಿಯಾದ ಘಟನೆ ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದಲ್ಲಿ ನಡೆದಿದೆ.
ಕಾಡಾನೆ ದಾಳಿಗೆ ಬಲಿಯಾದವರನ್ನು ಕಂಬೆಯಂಡ ರಾಜ ದೇವಯ್ಯ (59) ಎಂದು ಗುರುತಿಸಲಾಗಿದೆ. ಬೆಳಗ್ಗೆ ಎದ್ದು ತಮ್ಮ ಕಾಫಿ ತೋಟಕ್ಕೆ ಹೋಗಿದ್ದಾಗ ಸಡನ್ ಆಗಿ ಕಾಡಾನೆ ಧಿಡೀರ್ ದಾಳಿ ನಡೆಸಿದೆ.
ಘಟನೆ ಹಿನ್ನೆಲೆ ಊರಿನ ಜನರು ಭಯ ಭೀತರಾಗಿದ್ದು, ತಮ್ಮ ತೋಟಗಳಿಗೆ ತೆರಳಲು ಆತಂಕಪಡುವಂತಾಗಿದೆ. ಘಟನೆ ನಡೆದ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.