ಸ್ವಯಂಚಾಲಿತ ವಾಹನಗಳ ಐಡಿಯಾ ಬಹಳ ದಿನಗಳಿಂದ ವಾಸ್ತವಕ್ಕೆ ಬರುವ ಹಂತದಲ್ಲಿದ್ದು, ಆಪಲ್ ಸೇರಿದಂತೆ ತಂತ್ರಜ್ಞಾನ ಲೋಕದ ದಿಗ್ಗಜರೆಲ್ಲಾ ಈ ಫೀಚರ್ ಅನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಿವೆ.
ಇದೇ ವೇಳೆ, ಪೂರ್ಣ ಸ್ವಯಂ ಚಾಲನಾ ಕ್ಷೇತ್ರದಲ್ಲಿ ಮೊದಲಿಗರಲ್ಲಿ ಒಬ್ಬನಾದ ಟೆಸ್ಲಾ ಈ ಫೀಚರ್ ಅನ್ನು ಕೊಡುವ ಸನಿಹದಲ್ಲಿ ಬಂದು ನಿಂತಿದೆ. ಈ ಫೀಚರ್ ಅನ್ನು ತನ್ನೆಲ್ಲಾ ಕಾರುಗಳಲ್ಲಿ ಅಳವಡಿಸಿದ ಟೆಸ್ಲಾ, ಕೆಲವೊಮ್ಮೆ ಸ್ವಯಂ ಚಾಲಿತ ಫೀಚರ್‌ನಿಂದಾಗಿ ಕಾರುಗಳು ಆಗಾಗ ಅಪಘಾತಕ್ಕೆ ತುತ್ತಾಗುತ್ತಿರುವ ವಿಚಾರವನ್ನು ಕೇಳಬೇಕಾಗಿ ಬರುತ್ತಿದೆ. ಹೀಗಾಗಿ ಸಂಪೂರ್ಣ ಸುರಕ್ಷಿತ ಎಂದು ಕರೆಯಿಸಿಕೊಳ್ಳುವ ನಿಟ್ಟಿನಲ್ಲಿ ಟೆಸ್ಲಾ ಸಾಗಬೇಕಾದ ಹಾದಿ ಬಲು ದೂರ ಇದೆ.
ಸ್ವಯಂ ಚಾಲನೆ ಫೀಚರ್‌ನ ಬೆಟಾ ವರ್ಶನ್‌ಅನ್ನು ಖುದ್ದು ಪರೀಕ್ಷಿಸಿ ನೋಡಲು ಬಂದ ಸಿಎನ್‌ಎನ್ ವರದಿಗಾರರೊಬ್ಬರು ಬೆಚ್ಚಿಬೀಳಿಸುವ ಅನುಭವವೊಂದಕ್ಕೆ ಸಾಕ್ಷಿಯಾಗಿದ್ದಾರೆ.
ಮುಂಜಾನೆ ಸೇವಿಸದಿರಿ ಹುಳಿ ʼಪದಾರ್ಥʼ
ಮ್ಯಾಟ್ ಮ್ಯಾಕ್‌ಫಾರ್ಲಂಡ್ ಹೆಸರಿನ ಈ ವರದಿಗಾರ ಟೆಸ್ಲಾದ ಎಫ್‌ಎಸ್‌ಡಿ ಬೆಟಾ ಸಾಫ್ಟ್‌ವೇರ್ ಅನ್ನು ಮಾಡೆಲ್ 3 ಕಾರಿನ ಮೂಲಕ ನ್ಯೂಯಾರ್ಕ್ ನಗರದಲ್ಲಿ ಪರೀಕ್ಷಿಸಲು ತೆಗೆದುಕೊಂಡು ಹೋಗಿದ್ದಾರೆ. ಇದೇ ವೇಳೆ ತನ್ನತ್ತ ಬರುತ್ತಿರುವ ಸಂಚಾರ ದಟ್ಟಣೆಯತ್ತಲೇ ಕಾರು ತಿರುಗುತ್ತಾ ಸಾಗಿದೆ. ಮಾನವರ ನೆರವಿಲ್ಲದೇ ಸ್ವಯಂಚಾಲನೆಯ ಫೀಚರ್ ಕೆಲಸ ಮಾಡುವುದಿಲ್ಲ ಎಂದು ಇಲ್ಲಿ ಗಮನಿಸಬೇಕಾದ ಅಂಶ.
ಮ್ಯಾಕ್‌ಫಾರ್ಲೆಂಡ್ ಹಿಂದಿನ ಸೀಟಿನಲ್ಲಿ ಕುಳಿತಿದ್ದರೆ ಮತ್ತೊಬ್ಬ ಚಾಲಕ ಮುಂದಿನ ಸೀಟಿನಲ್ಲಿ ಕುಳಿತು, ಅಗತ್ಯ ಬಿದ್ದಾಗ ಕಾರಿನ ನಿಯಂತ್ರಣ ತೆಗೆದುಕೊಳ್ಳಲು ಸಿದ್ಧರಿದ್ದರು.
ನಗರದ ಬ್ರೂಕ್ಲಿನ್ ಫ್ಲಾಟ್‌ಬುಶ್ ಅವೆನ್ಯೂ ಪ್ರದೇಶದಲ್ಲಿ ಎಫ್‌ಎಸ್‌ಡಿ ಬೆಟಾ ಚಾಲಿತ ಕಾರಿನ ಪ್ರಯೋಗ ಮಾಡಹೊರಟ ಈ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. ಸಂಚಾರ ಸಾಗುತ್ತಿರುವ ದಿಕ್ಕಿನಲ್ಲಿ ಮಾಡೆಲ್ 3 ತಿರುಗಲು ಹಿಂದೇಟು ಹಾಕುತ್ತಿರುವ ಕ್ಷಣಗಳನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡಲಾಗಿದೆ.
ಸ್ವಯಂಚಾಲಿತ ಎಫ್‌ಎಸ್‌ಡಿಯಿಂದ ಕಾರಿನ ನಿಯಂತ್ರಣವನ್ನು ಆಗಾಗ ತನ್ನ ಕೈಗೆ ತೆಗೆದುಕೊಳ್ಳಬೇಕಾಗಿ ಬರುತ್ತಿದೆ ಎಂದು ಚಾಲಕ ತಿಳಿಸಿದ್ದಾರೆ. ಬಹಳಷ್ಟು ಕಡೆಗಳಲ್ಲಿ ಕಾರು ತಪ್ಪಾದ ತಿರುವುಗಳನ್ನು ಪಡೆಯುವುದರೊಂದಿಗೆ ಅನಿರೀಕ್ಷಿತವಾದ ಜಾಗಗಳಲ್ಲೆಲ್ಲಾ ಬ್ರೇಕ್ ಹಾಗೂ ಆಕ್ಸಿಲರೇಟರ್ ಬಳಕೆ ಮಾಡುತ್ತಿರುವುದನ್ನು ಮ್ಯಾಕ್‌ಫಾರ್ಲೆಂಡ್ ಗಮನಕ್ಕೆ ತಂದಿದ್ದಾರೆ.
“ರಸ್ತೆಯಲ್ಲಿ ಹಾರ್ನ್ ಮಾಡುವುದು ಸಾಮಾನ್ಯವಾಗಿತ್ತು. ಎಫ್‌ಎಸ್‌ಡಿಯನ್ನು ಬ್ರೂಕ್ಲಿನ್‌ನಲ್ಲಿ ನೇವಿಗೇಟ್ ಮಾಡಲು ಹೇಳುವುದು ವಿದ್ಯಾರ್ಥಿಯೊಬ್ಬನಿಗೆ ತಾನು ಸಿದ್ಧವಿಲ್ಲದ ಪರೀಕ್ಷೆಯೊಂದಕ್ಕೆ ಸಿದ್ಧನಾಗಲು ತಿಳಿಸಿದಂತೆ,” ಎಂದು ಮ್ಯಾಕ್‌ಫಾರ್ಲೆಂಡ್ ತಿಳಿಸಿದ್ದಾರೆ.
ಎಫ್‌ಎಸ್‌ಡಿ ಬೇಟಾ ಸಾಫ್ಟ್‌ವೇರ್ ಅನ್ನು $10,000 ಅನ್ನು ಒಂದೇ ಬಾರಿಗೆ ಅಥವಾ $199/ತಿಂಗಳಿನಂತೆ ತೆರುವ ಮೂಲಕ ಖರೀದಿ ಮಾಡಬಹುದಾಗಿದೆ. ಆದರೂ ಸಹ ಬೆಟಾ ಸಾಫ್ಟ್‌ವೇರ್‌ನಲ್ಲಿ ಸುಧಾರಣೆಯಾಗಬೇಕಿರುವುದು ಬಹಳಷ್ಟಿದೆ. ಎಫ್‌ಎಸ್‌ಡಿ ಹಾಗೂ ಆಟೋಪೈಲಟ್ ತಂತ್ರಾಂಶಗಳು ಕಳೆದ ಒಂದು ವರ್ಷದಿಂದ ಬಹಳಷ್ಟು ಟೀಕೆಗೆ ಗ್ರಾಸವಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.