ಪುರಾಣದಲ್ಲಿ ಮಣ್ಣಿಗೆ ಮಹತ್ವದ ಸ್ಥಾನವಿದೆ. ಪ್ರಾಚೀನ ಕಾಲದಲ್ಲಿ ಜೇಡಿಮಣ್ಣಿನ ಬಳಕೆ ಹೆಚ್ಚಾಗಿತ್ತು. ಪ್ರತಿಯೊಂದು ಕೆಲಸಕ್ಕೂ ಮಣ್ಣನ್ನು ಬಳಸ್ತಾ ಇದ್ದರು. ಭೋಜನ ಮಾಡುವ ಪಾತ್ರೆಯಿರಲಿ, ದೇವರ ಪೂಜೆಯ ವಸ್ತುವಿರಲಿ, ಮನೆಯನ್ನು ಸ್ವಚ್ಛಗೊಳಿಸುವುದಿರಲಿ ಎಲ್ಲದಕ್ಕೂ ಮಣ್ಣನ್ನು ಬಳಸ್ತಾ ಇದ್ರು. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಮಡಿಕೆ ಆರೋಗ್ಯ ವೃದ್ಧಿ ಜೊತೆಗೆ ಅದೃಷ್ಟ ಬದಲಾಯಿಸುತ್ತದೆ.
ದೇವರ ಮನೆಯಲ್ಲಿ ಮಣ್ಣಿನಿಂದ ಮಾಡಿದ ದೇವಾನುದೇವತೆಗಳನ್ನು ಪೂಜೆ ಮಾಡುವುದರಿಂದ ಆರ್ಥಿಕ ಸಮಸ್ಯೆ ದೂರವಾಗಿ ಧನಾಗಮನವಾಗುತ್ತದೆ.
ಮನೆಗೆ ಅದೃಷ್ಟ ಬರಬೇಕೆಂದಾದಲ್ಲಿ ಆಗ್ನೇಯ ದಿಕ್ಕಿನಲ್ಲಿ ಮಣ್ಣಿನಿಂದ ಮಾಡಿದ ಹಕ್ಕಿಯನ್ನಿಡಿ.
ಮಣ್ಣಿನಿಂದ ಮಾಡಿದ ಮಡಿಕೆಯಲ್ಲಿ ಯಾವುದೇ ಪಾನೀಯ ಸೇವನೆ ಮಾಡುವುದರಿಂದ ರುಚಿ ಹೆಚ್ಚಾಗುತ್ತದೆ. ಹಾಗೆ ಜಾತಕದಲ್ಲಿ ಮಂಗಳ ಗ್ರಹದ ದೋಷವಿದ್ದಲ್ಲಿ ನಿವಾರಣೆಯಾಗುತ್ತದೆ.
ಮನೆಯ ಈಶಾನ್ಯ ದಿಕ್ಕಿನಲ್ಲಿ ಹೂಜಿ ಇಡುವುದರಿಂದ ಸಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ.
ಬೌದ್ಧಿಕ, ಆಧ್ಯಾತ್ಮಿಕ, ಮಾನಸಿಕ ತೊಂದರೆಯಿಂದ ಬಳಲುತ್ತಿರುವವರು ಮಣ್ಣಿನ ಹೂಜಿಯಲ್ಲಿ ಗಿಡಗಳಿಗೆ ನೀರು ಹಾಕಬೇಕು.
ಮಣ್ಣಿನ ಮಡಿಕೆಯಲ್ಲಿ ನೀರು ಕುಡಿದ್ರೆ ಬುಧ ಹಾಗೂ ಚಂದ್ರನ ಕೃಪೆಗೆ ಪಾತ್ರರಾಗಬಹುದು.
ಮನಸ್ಸಿಗೊಪ್ಪುವ ನೌಕರಿ ಪಡೆಯಲು ಮಣ್ಣಿನ ಹೂಜಿಯಲ್ಲಿ ನೀರು ತುಂಬಿ ಅದನ್ನು ಅರಳಿ ಮರಕ್ಕೆ ಹಾಕಬೇಕು.