ಬೆಂಗಳೂರು : ಐತಿಹಾಸಿಕ ಚೆನ್ನಮ್ಮನ ಕಿತ್ತೂರು ಉತ್ಸವಕ್ಕೆ ಜಿಲ್ಲಾಡಳಿತ ಸಜ್ಜಾಗಿದ್ದು, ಅಕ್ಟೋಬರ್ 23 ರಿಂದ ಚೆನ್ನಮ್ಮನ ಕಿತ್ತೂರು ಉತ್ಸವ ಆರಂಭವಾಗಲಿದೆ.
ಅ.23 ರಿಂದ 25 ರವರೆಗೆ 3 ದಿನ ಉತ್ಸವ ನಡೆಯಲಿದ್ದು, ಇಂದು ಜ್ಯೋತಿ ಯಾತ್ರೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ವಿಧಾನ ಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಿತ್ತೂರಿನ ಕೋಟೆ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಿತ್ತೂರು ಕೋಟೆ ಇತಿಹಾಸದ ಮಾಹಿತಿ ನೀಡಲು ಗೈಡ್ಸ್ ನೇಮಿಸುವುದು, ವಾರದಲ್ಲಿ ಎರಡು ಬಾರಿ ಧ್ವನಿ ಮತ್ತು ಬೆಳಕು ಪ್ರದರ್ಶನ, ಲೈಟಿಂಗ್ಸ್ ಸೇರಿದಂತೆ ಹಲವು ಸಿದ್ದತೆಯನ್ನು ಜಿಲ್ಲಾಡಳಿತ ಕೈಗೊಂಡಿದೆ. ಕಿತ್ತೂರಿನ ಉತ್ಸವದಲ್ಲಿ ಸಂಗೀತ, ಸಾಹಿತ್ಯ, ಸಂಸ್ಕ್ರತಿ, ಕ್ರೀಡೆ ಸೇರಿದಂತೆ ಹಲವು ಕಲೆಗಳು ಅನಾವರಣಗೊಳ್ಳಲಿದೆ.