ಮನುಷ್ಯ ದಿನದಿಂದ ದಿನಕ್ಕೆ ಭೂಮಿಯ ಇಂಚಿಂಚು ಜಾಗ ಆಕ್ರಮಿಸಿಕೊಳ್ತಾ ಹೋಗ್ತಿದ್ದಾನೆ. ಕಾಡುಗಳನ್ನು ಆತ ಬಿಡ್ತಿಲ್ಲ. ಅಲ್ಲೂ ಕೂಡಾ ಮರಗಿಡಗಳನ್ನ ಕಡಿದು ಹಾಕಿ ಮೆರೆಯುತ್ತಿದ್ದಾನೆ. ಮನುಷ್ಯನದ್ದೇ ದರ್ಬಾರ್ ನಡೆಯುತ್ತಿರುವಾಗ ಕಾಡಿನ ಪ್ರಾಣಿಗಳು ಎಲ್ಲಿಗೆ ಹೋಗ್ಬೇಕು ಅಲ್ವಾ..? ಆಗ ಅವು ಕೂಡಾ ಮನುಷ್ಯನ ಮೇಲೆ ಪ್ರತಿದಾಳಿ ನಡೆಸುವುದಕ್ಕೆ ಶುರುಮಾಡುತ್ತೆ. ಅಸ್ಸಾಂನ ಕಾಜಿರಂಗಾ ಅರಣ್ಯದ ಬಳಿಯೂ ಅಂತಹದ್ದೆ ಒಂದು ದೃಶ್ಯ ನೋಡಲು ಸಿಕ್ಕಿದೆ.
ಅದು ಕಾಡಿನ ಮಧ್ಯದಲ್ಲಿ ಹಾದು ಹೋಗಿರುವಂತಹ ಹೈವೇ ರಸ್ತೆ. ಪ್ರತಿದಿನದಂತೆ ವಾಹನಗಳ ಓಡಾಟ ಸಾಮಾನ್ಯವಾಗಿತ್ತು. ಅದೇ ರಸ್ತೆಯಲ್ಲಿ ಸೈಕಲ್ ಸವಾರನೊಬ್ಬ ತನ್ನ ಪಾಡಿಗೆ ತಾನು ಹೋಗುತ್ತಿದ್ದ. ಆಗಲೇ ನೋಡಿ ಕಾಡೊಳಗಿನಿಂದ ಬಂದ ಚಿರತೆಯೊಂದು ಆ ಸೈಕಲ್ ಸವಾರನ ಮೇಲೆ ಅಟ್ಯಾಕ್ ಮಾಡಿತ್ತು. ಚಿರತೆ ಮಾಡಿದ್ದ ಅಟ್ಯಾಕ್‌ಗೆ ಆತ ಅಕ್ಷರಶಃ ಪತರಗುಟ್ಟಿ ಹೋಗಿದ್ದ.
ಚಿರತೆ ದಾಳಿ ಮಾಡಿದಾಕ್ಷಣ ಆತ ಸೈಕಲ್ ಮೇಲಿಂದ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದಾನೆ. ಅದೇ ಸಮಯದಲ್ಲಿ ಅಲ್ಲಿ ಕೆಂಪು ಬಣ್ಣದ ಕಾರೊಂದು ಬರುತ್ತೆ. ಚಿರತೆ ಆ ಕಾರ್ ನೋಡಿ ಗಾಬರಿಯಾಗಿ ಮತ್ತೆ ಕಾಡಿನೊಳಗೆ ಓಡಿ ಹೋಗುತ್ತೆ. ಸೈಕಲ್ ಸವಾರ ಸುಧಾರಿಸಿಕೊಂಡು ಮತ್ತೆ ಓಡಿ ಹೋಗುತ್ತಾನೆ.
ಆ ಶಾಕ್‌ನಿಂದ ಹೊರ ಬರಲು ಇನ್ನೂ ಎಷ್ಟು ದಿನ ಬೇಕೋ ಏನೋ. ಸಿಸಿಟಿವಿಯಲ್ಲಿ ಈ ದೃಶ್ಯ ರೆಕಾರ್ಡ್ ಆಗಿದ್ದು, ಇದು ಕಾಜಿರಂಗ ರಾಷ್ಟ್ರೀಯ ಉದ್ಯಾನವದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಹಲ್ದಿಬರಿ ಅನಿಮಲ್ ಕಾರಿಡಾರ್‌ನಲ್ಲಿ ನಡೆದ ಘಟನೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಕಾಡುಪ್ರಾಣಿಗಳು ಎಷ್ಟು ಡೇಂಜರಸ್ ಅಂತ ಈ ವಿಡಿಯೋ ನೋಡಿದವರು ಹೇಳುತ್ತಿದ್ದಾರೆ.