ತಂತ್ರಜ್ಞಾನ ಲೋಕದಲ್ಲಿ ಪ್ರತಿನಿತ್ಯವೂ ಕಂಡು ಕೇಳರಿಯದ, ಊಹಿಸಲೂ ಕಷ್ಟವಾಗುವಂಥ ಆವಿಷ್ಕಾರಗಳು ಘಟಿಸುತ್ತಲೇ ಇರುತ್ತವೆ.
ಇಂಥದ್ದೇ ಒಂದು ನಿದರ್ಶನದಲ್ಲಿ, ಜರ್ಮನಿಯ ಆಟೋಮೊಬೈಲ್ ದಿಗ್ಗಜ ಬಿಎಂಡಬ್ಲ್ಯೂ ತಮ್ಮ ಐಎಕ್ಸ್ ಎಂ60 ಎಲೆಕ್ಟ್ರಿಕ್ ಎಸ್‌ಯು ನಲ್ಲಿ ಅದ್ಭುತ ತಂತ್ರಜ್ಞಾನವೊಂದನ್ನು ಪರಿಚಯಿಸಲಿದೆ.
ಕೇವಲ ಬಟನ್ ಒತ್ತುವ ಮೂಲಕ ಕಾರಿನ ಹೊರಾಂಗಣ ಬಣ್ಣ ಬದಲಿಸಬಲ್ಲ ತಂತ್ರಜ್ಞಾನವನ್ನು ಬಿಎಂಡಬ್ಲ್ಯೂ ಸಿಇಎಸ್ 2022 ಪ್ರದರ್ಶನದಲ್ಲಿ ಅನವಾರಣಗೊಳಿಸಲಿದೆ…!
ಬಾಲ ಆಧಾರ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ…..? ಇಲ್ಲಿದೆ ಉಪಯುಕ್ತ ಮಾಹಿತಿ
ಇದೇ ಮೇಳದ ವೇಳೆ, ’ಚಲಿಸುತ್ತಿರುವ ಕಾರಿನೊಳಗೆ ಥಿಯೇಟರ್ ಅನುಭವ’ವನ್ನೂ ಸಹ ಪರಿಚಯಿಸಲು ಆಟೋಮೊಬೈಲ್ ದಿಗ್ಗಜ ಸಿದ್ಧತೆ ಮಾಡಿಕೊಂಡಿದೆ. ಮೇಲ್ಕಂಡ ವಿಚಾರಗಳ ಬಗ್ಗೆ ಕಂಪನಿ ಸದ್ಯದ ಮಟ್ಟಿಗೆ ಹೆಚ್ಚು ವಿವರಗಳನ್ನು ನೀಡಿಲ್ಲ.
ಮುಂದಿನ ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಐಎಕ್ಸ್ ಎಂ60, ತನ್ನ ರೇಂಜ್‌ನ ಟಾಪ್ ಮಾಡೆಲ್ ಆಗಿದೆ. ಇದೇ ಕಾರಿನ ಐಎಕ್ಸ್ ವರ್ಶನ್ ಅನ್ನು ಬಿಎಂಡಬ್ಲ್ಯೂ ಭಾರತದಲ್ಲಿ ಬಿಡುಗಡೆ ಮಾಡಿದ್ದು, ಇದರ ಎಕ್ಸ್ ಶೋರೂಂ ಬೆಲೆ 1.16 ಕೋಟಿ ರೂಪಾಯಿಗಳಾಗಿವೆ.