ನಮ್ಮ ಆಫೀಸ್ ನಲ್ಲಿ ಎ.ಸಿ ಇದೆ. ಹೊರಗೆ ಎಷ್ಟು ಬಿಸಿಲಿದ್ದರೂ ಆರಾಮವಾಗಿ ಕೆಲಸ ಮಾಡಬಹುದು. ಮನೆಯಲ್ಲೂ ಎ.ಸಿ. ಇರೋದ್ರಿಂದ ಏನೂ ತೊಂದರೆ ಇಲ್ಲ ಅಂತಾ ಅನೇಕರು ಹೇಳ್ತಾರೆ. ಇತ್ತೀಚಿನ ದಿನಗಳಲ್ಲಿ ಎ.ಸಿ. ಬಳಕೆ ಸಾಮಾನ್ಯವಾಗಿದೆ. ಕಚೇರಿ, ಮನೆ ಎಲ್ಲ ಕಡೆ ಎ.ಸಿ. 24 ಗಂಟೆ ಚಾಲ್ತಿಯಲ್ಲಿರುತ್ತದೆ.
ಮನೆ, ಕಚೇರಿ ನಿರ್ಮಾಣದ ವೇಳೆಯೇ ಎ.ಸಿ. ಅಳವಡಿಸುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್. ಎ.ಸಿ. ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ. ಆ ಕ್ಷಣಕ್ಕೆ ಹಿತವೆನಿಸುವ ಕೃತಕ ತಾಪಮಾನ ಯಂತ್ರ ಎಷ್ಟು ಅಪಾಯಕಾರಿ ಎಂಬುದು ಅನೇಕರಿಗೆ ತಿಳಿದಿಲ್ಲ. ನಿಮಗೆ ಗೊತ್ತಿಲ್ಲದೆ ಅನೇಕ ರೋಗಗಳು ನಿಮ್ಮನ್ನು ಆವರಿಸಿಕೊಳ್ಳುತ್ತವೆ.
24 ಗಂಟೆ ಎ.ಸಿ. ಕೆಳಗೆ ಕುಳಿತುಕೊಂಡಲ್ಲಿ ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗುತ್ತದೆ. ವೃತ್ತಿಪರರ ಪ್ರಕಾರ ದಿನದಲ್ಲಿ ಐದು ಗಂಟೆ ಎ.ಸಿ. ಕೆಳಗೆ ಕುಳಿತುಕೊಂಡ್ರೆ ಸೈನಸ್ ಸೋಂಕು ಕಾಡಲು ಶುರುವಾಗುತ್ತದೆ.
ಎ.ಸಿ. ಹಾಕಿ ರಾತ್ರಿ ಪೂರ್ತಿ ಮಲಗ್ತೀರಾ ಅಥವಾ ಹಗಲಿನಲ್ಲಿ ಅನೇಕ ಗಂಟೆ ಕುಳಿತುಕೊಳ್ತಿರಾ ಎಂದಾದಲ್ಲಿ ನಿಶ್ಯಕ್ತಿ ನಿಮ್ಮನ್ನು ಕಾಡುತ್ತದೆ.
ಅನೇಕ ಹೊತ್ತು ಎ.ಸಿ. ಕೆಳಗೆ ಕುಳಿತುಕೊಳ್ಳುವುದರಿಂದ ಹೊಸ ಗಾಳಿ ನಮ್ಮ ದೇಹವನ್ನು ಸೇರುವುದಿಲ್ಲ. ಇದ್ರಿಂದಾಗಿ ಜ್ವರ ಹಾಗೂ ಶೀತ ಪದೇ ಪದೇ ಕಾಣಿಸಿಕೊಳ್ಳುತ್ತದೆ.
ಕಣ್ಣುಗಳು ಶುಷ್ಕಗೊಳ್ಳೋದು ಎ.ಸಿ. ಯಲ್ಲಿ ಕುಳಿತುಕೊಳ್ಳುವವರ ಸಾಮಾನ್ಯ ಸಮಸ್ಯೆ. ಎ.ಸಿ. ಯಲ್ಲಿ ಕೆಲಸ ಮಾಡುವವರ ಚರ್ಮ ಕೂಡ ನೀರಿನ ಅಂಶ ಕಳೆದುಕೊಂಡು ಶುಷ್ಕವಾಗುತ್ತದೆ.
ಎ.ಸಿ.ಯನ್ನು ನಿಗದಿತ ಸಮಯಕ್ಕೆ ಸ್ವಚ್ಛಗೊಳಿಸೋದಿಲ್ಲ. ಇದ್ರಿಂದ ತಣ್ಣನೆಯ ಗಾಳಿ ಜೊತೆ ಎ.ಸಿ.ಯಲ್ಲಿರುವ ಧೂಳು ಕೂಡ ನಮ್ಮ ಉಸಿರು ಸೇರುತ್ತದೆ. ಇದ್ರಿಂದ ದೇಹದಲ್ಲಿರುವ ಪ್ರತಿರಕ್ಷಣಾ ಶಕ್ತಿ ಕಡಿಮೆಯಾಗುವ ಜೊತೆಗೆ ಕೆಲವೊಂದು ಅಲರ್ಜಿ ಸಮಸ್ಯೆ ಕಾಡುತ್ತದೆ.