ಬ್ಯುಸಿನೆಸ್ ಮಾಡಲು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಯಾವ ಬ್ಯುಸಿನೆಸ್ ಶುರುಮಾಡಬೇಕು ಎಂಬ ಗೊಂದಲ ಎಲ್ಲರನ್ನು ಕಾಡುತ್ತದೆ. ಹಾಗೆ ಹಣದ ಅಭಾವದಿಂದ ಬ್ಯುಸಿನೆಸ್ ಆಲೋಚನೆ ಕೈಬಿಡ್ತಾರೆ. ಆದ್ರೆ ಕೆಲವೊಂದು ಕಡಿಮೆ ಬಂಡವಾಳ ಹೂಡಿ ಕೈತುಂಬಾ ಆದಾಯ ಗಳಿಸುವ ಬ್ಯುಸಿನೆಸ್ ಗಳಿವೆ.
ಇಂದಿನ ದಿನಗಳಲ್ಲಿ ನೈಸರ್ಗಿಕ ಉತ್ಪನ್ನ ಹಾಗೂ ಔಷಧಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದ್ರ ಮಾರುಕಟ್ಟೆ ಕೂಡ ವೇಗವಾಗಿ ಬೆಳೆಯುತ್ತಿದೆ. ಔಷಧೀಯ ಸಸ್ಯಗಳ ವ್ಯವಹಾರವನ್ನು ಶುರು ಮಾಡಿ ಆದಾಯ ಗಳಿಸಬಹುದು.
ಔಷಧಿ ಸಸ್ಯಗಳ ಕೃಷಿಗೆ ದೊಡ್ಡ ಕೃಷಿ ಭೂಮಿ ಹಾಗೂ ಹೆಚ್ಚಿನ ಹೂಡಿಕೆ ಬೇಕೆಂದು ನೀವು ಅಂದಾಜಿಸಿದ್ದರೆ ತಪ್ಪು. ಕೃಷಿ ಭೂಮಿಯನ್ನು ಕಾಂಟ್ರಕ್ಟ್ ರೂಪದಲ್ಲಿ ಪಡೆಯಬಹುದು. ಅನೇಕ ಕಂಪನಿಗಳು ಒಪ್ಪಂದದ ಮೇಲೆ ಔಷಧಿ ಸಸ್ಯಗಳನ್ನು ಬೆಳೆಸುತ್ತಿವೆ. ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ನೀವು ಕೆಲಸ ಶುರು ಮಾಡಬಹುದು.
ತುಳಸಿ, ಅಲೋವೇರಾ ಸೇರಿದಂತೆ ಸುಲಭವಾಗಿ ಬೆಳೆಯುವ ಔಷಧಿ ಸಸ್ಯಗಳನ್ನು ನೀವು ಬೆಳೆಸಬಹುದು. ಸಣ್ಣ ಕುಂಡಗಳಲ್ಲಿ ಇವುಗಳನ್ನು ನೀವು ಬೆಳೆಸಬಹುದು. ಇದನ್ನು ಬೆಳೆಸಲು ಹೆಚ್ಚು ಖರ್ಚು ಬೀಳುವುದಿಲ್ಲ. ಆದ್ರೆ ಕೈತುಂಬ ಆದಾಯ ಗಳಿಸಬಹುದು. 1 ಹೆಕ್ಟೆರ್ ಪ್ರದೇಶದಲ್ಲಿ ತುಳಸಿ ಬೆಳೆಸಲು 15 – 20 ಸಾವಿರ ರೂಪಾಯಿ ಖರ್ಚು ಮಾಡಿದ್ರೆ ಮೂರು ತಿಂಗಳಲ್ಲಿ ನಿಮ್ಮ ಬೆಳೆ ಸುಮಾರು 3 ಲಕ್ಷಕ್ಕೆ ಮಾರಾಟವಾಗುತ್ತದೆ.